ಹೈದರಾಬಾದ್: ಅಕ್ಕಿನೇನಿ ನಾಗಾರ್ಜುನ ಮತ್ತು ಅಮಲಾರ ಪುತ್ರ ನಾಗ ಚೈತನ್ಯ ಜೊತೆಗಿನ ವೈವಾಹಿಕ ಸಂಬಂಧವನ್ನು ಮುರಿದುಕೊಂಡು ಸ್ವತಂತ್ರವಾಗಿರುವ ನಟಿ ಸಮಂತಾ ರುತ್ ಪ್ರಭು, ಬಾಲಿವುಡ್ ಸಿನಿಮಾದತ್ತ ಹೋಗುತ್ತಿದ್ದಾರೆ ಎಂಬ ಮಾತು ತೆಲುಗು ಸಿನಿಮಾ ವಲಯದಲ್ಲಿ ಕೇಳುತ್ತಿತ್ತು. ಆದರೆ, ಈಗ ಅವರು ಇಂಗ್ಲಿಷ್ನ ಅರೇಂಜೆಮೆಂಟ್ಸ್ ಆಫ್ ಲವ್’ ಸಿನಿಮಾದ ಮುಖ್ಯಭೂಮಿಕೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬಿಎಎಫ್ಟಿಎ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಫಿಲಿಪ್ ಜಾನ್ ಈ ಸಿನಿಮಾದ ನಿರ್ದೇಶಕರಾಗಿದ್ದು, ಭಾರತೀಯ ಲೇಖಕ ತೈಮೆರಿ ಎನ್. ಮುರಾರಿ ಅವರ ಕಾಂದಬರಿಯನ್ನಾಧರಿಸಿದ ಸಿನಿಮಾ ಇದಾಗಿದೆ. ಈ ಸಿನಿಮಾವನ್ನು ಸುನೀತಾ ತಾಟಿ ಅವರ ಗುರು ಫಿಲಿಮ್ಸ್ ನಿರ್ಮಾಣ ಮಾಡುತ್ತಿದೆ.
ಭಾರತೀಯ ಸಂಜಾತನಾದ ನಾಯಕ ವೃದ್ಧ ತಂದೆಯನ್ನು ಹುಡುಕಿಕೊಂಡು ಯಾವುದೇ ಪೂರ್ವಸಿದ್ಧತೆ ಇಲ್ಲದೆ ತಾಯ್ನಾಡಿಗೆ ಬರುವುದರೊಂದಿಗೆ ಕಥೆ ಪ್ರವೇಶ ಪಡೆಯುತ್ತದೆ. ಈ ಸಿನಿಮಾದಲ್ಲಿ ಸಮಂತಾರದ್ದು 27 ವರ್ಷದ ಅತ್ಯಂತ ಆತ್ಮವಿಶ್ವಾಸ ಮತ್ತು ದೃಢ ಮನಸ್ಕ ಹಾಗೂ ಕೀಟಲೆ ಸ್ವಾಭಾವದ ಪಾತ್ರ. ತಮಿಳು ಮೂಲದ ಪ್ರಗತಿಪರವಾದ ಉಭಯಲಿಂಗಿಗಳ ಸ್ನೇಹ ಮತ್ತು ಸಖ್ಯವನ್ನು ಬಯಸುವಾಕೆ. ಆದರೆ ಈಕೆಯ ಪೋಷಕರು ಕಟ್ಟಾ ಸಂಪ್ರದಾಯವಾದಿಗಳು. ಮಗಳ ಮದುವೆಯನ್ನು ಹಿರಿಯರು ನಿಶ್ಚಯಿಸಿದ ವರನೊಂದಿಗೆ ಆಗಬೇಕೆಂದು ಬಯಸುವವರು. ಇಂಥ ಪತ್ತೇದಾರಿ ಯುವತಿಯನ್ನು ನಾಯಕ ಭೇಟಿಯಾಗಿ ತನ್ನ ತಂದೆಯನ್ನು ಹುಡುಕಲು ನೆರವು ಕೋರುತ್ತಾನೆ.
ಈ ಸಿನಿಮಾ ಕಥೆ ಕೇಳಿ ರೋಮಾಂಚನಗೊಂಡ ಸಮಂತಾ, “ಪ್ರೀತಿ ಮತ್ತು ವ್ಯಯಕ್ತಿಕ ಕಥೆಯನ್ನು ಹೊಂದಿರುವ ಈ ಸಿನಿಮಾದ ಮೂಲಕ ಹೊಸ ಯಾನವನ್ನು ಆರಂಭಿಸುತ್ತಿರುವೆ. ಫಿಲಿಪ್ ಜಾನ್ರನ್ನು ಬಹು ವರ್ಷದಿಂದ ಗಮನಿಸುತ್ತಿದ್ದೇನೆ. ಪ್ರತಿಭಾವಂತ ನಿರ್ದೇಶಕ. ‘ಡೌನ್ಟನ್ ಅಬ್ಬೆ’ ಸಿನಿಮಾ ಅಚ್ಚುಮೆಚ್ಚು. ಅವರ ಜತೆಗೆ ಕೆಲಸ ಮಾಡಲು ಉತ್ಸುಕಳಾಗಿರುವೆ. ಹಾಗೆಯೇ ಸುನೀತಾ ಅವರೊಂದಿಗೆ ಹಿಂದೆ ‘ಓ! ಬೇಬಿ’ ಸಿನಿಮಾ ಮಾಡಿದ್ದೆ. ಅದರಲ್ಲಿ ನನ್ನದು ಸಂಕೀರ್ಣ ಪಾತ್ರ, ಸವಾಲಿನಿಂದ ಕೂಡಿತ್ತು. ಈಗ ಅವರೊಂದಿಗೆ ಇನ್ನೊಂದು ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ’ ಎಂದಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಆಗಸ್ಟ್ನಲ್ಲಿ ತೆರೆಕಾಣುವ ಸಾಧ್ಯತೆ ಇದೆ.
Samantha Prabhu Bags New Film ‘Arrangements of Love’
ಇದನ್ನು ಓದಿ: ಸಮಂತಾ ಮಾನನಷ್ಟ ಪ್ರಕರಣ ತ್ವರಿತ ವಿಚಾರಣೆಗೆ ಹೈದರಾಬಾದ್ ನ್ಯಾಯಾಲಯ ನಕಾರ
ಇದನ್ನೂ ಓದಿ: ಹಾಲಿವುಡ್ಗೆ ಎಂಟ್ರಿ ಕೊಡಲಿದ್ದಾರೆ ಸಮಂತಾ ರುತ್ ಪ್ರಭು
Discussion about this post