ಕೆನಡಾ: ಗೌರಿ ಲಂಕೇಶ್ ಅವರ ದಿವಸವನ್ನು ಸೆಫ್ಟೆಂಬರ್ ೫ರಂದು ಪ್ರತಿ ವರ್ಷವೂ ಆಚರಿಸುವುದಾಗಿ ಶುಕ್ರವಾರ ಆ. ೨೭ರಂದು ಬರ್ನಬಿ ನಗರದಲ್ಲಿ ಘೋಷಣೆ ಮಾಡಲಾಯಿತು. ಗೌರಿಯವರ ಕುರಿತು ಮಾತನಾಡಿದ ಮೇಯರ್ ಹರ್ಲೆ, ’ಸತ್ಯ ಮತ್ತು ನ್ಯಾಯಕ್ಕಾಗಿ ನಿಂತ ಧೈರ್ಯವಂತ ಭಾರತೀಯ ಪತ್ರಕರ್ತೆ’ ಎಂದು ಬಣ್ಣಿಸಿದ್ದಾರೆ.
ಮೇಯರ್ ಮೈಕ್ ಹರ್ಲೇಯವರ ಸಹಿ ಪಡೆದಿರುವ ಘೋಷಣಾ ಪತ್ರವನ್ನು ಸಹ ಅಪ್ ಲೋಡ್ ಮಾಡಲಾಗಿದೆ. ಈ ಘೋಷಣ ಪತ್ರದಲ್ಲಿ ಹೀಗೆ ನಮೂದಿಸಲಾಗಿದೆ. “ಗೌರಿ ಲಂಕೇಶ್ ಒಬ್ಬ ಧೈರ್ಯಶಾಲಿ ಸಂಪಾದಕಿಯಾಗಿದ್ದು, 2017 ರಲ್ಲಿ ಬೆಂಗಳೂರಿನಲ್ಲಿ ಬಲಪಂಥೀಯ ಉಗ್ರರಿಂದ ಹತ್ಯೆಗೀಡಾದರು.
ಭಾರತದಲ್ಲಿ 2014 ರಿಂದ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ರಾಜಕೀಯ ಭಿನ್ನಮತೀಯರ ಮೇಲೆ ದಾಳಿಗಳು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಗೌರಿ ಲಂಕೇಶ್ ಬಲಪಂಥೀಯ ಹಿಂಸೆಯ ವಿರುದ್ಧ ನಿರಂತರವಾಗಿ ಬರೆದರು. ಅಲ್ಪಸಂಖ್ಯಾತರನ್ನು ಒಳಗೊಂಡಂತೆ ಅಧಿಕಾರ ರಹಿತ ಜನರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿದರು” ಎಂದು ಮುದ್ರಿಸಲಾಗಿದೆ.
ಘೋಷಣಾ ಪತ್ರದ ಲಿಂಕ್ ಇಲ್ಲಿದೆ https://countercurrents.org/2021/08/canadian-municipality-proclaims-gauri-lankesh-day/
Discussion about this post