ಚಿಕ್ಕಮಗಳೂರು: ರೈತರ ಒಳಿತಿಗಾಗಿ ಅವರ ಬಳಕೆಗಾಗಿ ಇರುವ ಸೊಪ್ಪಿನ ಬೆಟ್ಟವನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಹೀಗಾಗಿ ಸರ್ಕಾರ ಈ ಕುರಿತು ಲಿಖಿತ ರೂಪದ ಪ್ರತಿ ನೀಡಿದೆ ಎಂದು ಶಾಸಕ ಟಿ.ಡಿ ರಾಜೇಗೌಡ ಮಾಹಿತಿ ನೀಡಿದರು.
ಈ ಹಿಂದಿನ ಅಧಿವೇಶನದಲ್ಲಿ ಕಂದಾಯ ಸಚಿವರಿಗೆ ಫಾರಂ ನಂಬರ್ 50, 94 ಸಿ, 94 ಸಿಸಿ, 53, ಗೋಮಾಳ, ಸೊಪ್ಪಿನ ಬೆಟ್ಟದ ಜಾಗ ಮಂಜೂರಾತಿಗೆ ಇರುವ ಸಮಸ್ಯೆಯನ್ನು ಆದಷ್ಟು ಶೀಘ್ರವಾಗಿ ಪರಿಹರಿಸಿಕೊಡುವಂತೆ ಮನವಿ ಮಾಡಲಾಗಿತ್ತು,
ಕಂದಾಯ ಸಚಿವರೂ ಈ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ದರು ಆದರೆ ಈ ಅಧಿವೇಶನದಲ್ಲಿ ಜಾಗ ಮಂಜೂರು ಮಾಡಲು ಸಾಧ್ಯವಿಲ್ಲ ಅದಕ್ಕೆ ಅವಕಾಶವಿಲ್ಲ ಎಂಬ ಉತ್ತರವನ್ನು ನೀಡಿದ್ದಾರೆ ಎಂದು ಶಾಸಕ ಟಿ.ಡಿ ರಾಜೇಗೌಡ ತಿಳಿಸಿದರು.
ರೈತರ ಬದುಕನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲುವಾಗಿ ಸರ್ಕಾರ ಹೊರಟಿದೆ. ಮಲೆನಾಡಿನ ಭಾಗಗಳಲ್ಲಿ 94 ಸಿ, 94 ಸಿಸಿ, ಕುರಿತಾದ ಸಮಸ್ಯೆಗಳು ಬಹಳಷ್ಟಿವೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಕುರಿತು ಮುಂದಿನ ದಿನಗಳಲ್ಲಿ ಜನರ ಅಭಿಪ್ರಾಯಗಳನ್ನು ತೆಗೆದುಕೊಂಡು ನಂತರ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.

























Discussion about this post