ಚಿಕ್ಕಮಗಳೂರು: ನಗರದಲ್ಲಿ ವೇಶ್ಯಾವಾಟಿಕೆ ಆರೋಪ ನಡೆಸಿ, ವಿಡಿಯೋ ಬಲವಂತವಾಗಿ ಶೂಟ್ ಮಾಡಿ, ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಒಡ್ಡಿ ಹಣ ಬಾಚಿದ ಸುಮಾರು ೧೩ ಜನ ವಂಚಕರನ್ನು ಪೋಲೀಸರು ಬಂಧಿಸಿದ್ದಾರೆ.
ಸಿನಿಮೀಯ ರೀತಿಯಲ್ಲಿ ವ್ಯಕ್ತಿಯೊಬ್ಬನಿಗೆ ಗೊತ್ತಿದ್ದ ಮಹಿಳೆ ಕರೆ ಮಾಡಿ ತುರ್ತಾಗಿ ಆಸ್ಪತ್ರೆಗೆ ಹತ್ತು ಸಾವಿರ ಹಣ ಕೇಳಿದ್ದು, ಹಣ ತೆಗೆದುಕೊಂಡು ಒಂದು ವಿಳಾಸಕ್ಕೆ ಬರಲು ಹೇಳಿದ್ದಾಳೆ.
ಅದೇ ವ್ಯಕ್ತಿ ತನ್ನ ಸ್ನೇಹಿತನ ಜೊತೆ ಹಣ ತಗೊಂಡು ಹೇಳಿದ್ದ ವಿಳಾಸದ ಮನೆ ಹತ್ರ ಹೋಗಿ ಫೋನ್ ಮಾಡಿದ್ದ ಪರಿಚಿತ ಮಹಿಳೆ ಜೊತೆ ಮಾತನಾಡುವಾಗ, ಐದು ಜನ ಅಪರಿಚಿತರು ಬಂದು ವೈಶ್ಯಾವಾಟಿಕೆ ನಡೆಸುತ್ತಿದ್ದೀರಾ? ಎಂದು ಬೆದರಿಕೆ ಒಡ್ಡಿ, ಅಲ್ಲಿದ್ದ ಇಬ್ಬರೂ ಮಹಿಳೆಯರನ್ನು ಬಲವಂತವಾಗಿ ನಗ್ನಗೊಳಿಸಿ ವಿಡಿಯೋ ಶೂಟಿಂಗ್ ನಡೆಸಿದ್ದಾರೆ ಎನ್ನಲಾಗಿದೆ.
ಮೊದಲ ಹಂತದಲ್ಲಿ ಬೆದರಿಕೆ ಒಡ್ಡಿ ಎಪ್ಪತ್ತೈದು ಸಾವಿರ ರೂ. ವಸೂಲಿ ಮಾಡಿದ್ದಾರೆ. ತಾವೇ ಪೋಲಿಸರು ಅಂತ ಇಪ್ಪತ್ತು ಲಕ್ಷ ರೂ. ಬೇಡಿಕೆ ಇಟ್ಟು ಕೊನೆಗೆ ಎರಡು ಲಕ್ಷಕ್ಕೆ ಡೀಲ್ ಕುದುರಿಸಿಕೊಂಡಿದ್ದರು ಎಂದು ದೂರುದಾರರು ಪೋಲೀಸರಿಗೆ ತಿಳಿಸಿದ್ದಾರೆ.
ಅವರದ್ದೇ ಕಾರ್ ನಲ್ಲಿ ಆರೋಪಿಗಳು ಎಟಿಎಂ ಗೆ ತೆರಳಿ ಹಣ ಡ್ರಾ ಮಾಡಿದ್ದು, ಉಳಿಕೆ ಹಣಕ್ಕೆ ಸಂಜೆವರೆಗೆ ಅಂತ ತಾಕೀತು ಮಾಡಿದ್ದರು ಎನ್ನಲಾಗಿದೆ. ಹನಿಟ್ರ್ಯಾಪ್ ನಲ್ಲಿ ಸಿಲುಕಿಕೊಂಡವರು ಧೈರ್ಯದಿಂದ ಠಾಣೆ ಮೆಟ್ಟಿಲು ಹತ್ತಿ ದೂರು ದಾಖಲಿಸಿದ್ದಾರೆ. ಪ್ರಕರಣ ಬೇಧಿಸಿದ ಪೋಲಿಸರು ಆರು ಮಹಿಳೆಯರು ಸೇರಿ ಒಟ್ಟು ೧೩ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ೧ ಆಟೋರಿಕ್ಷಾ, ಸ್ಕೂಟಿ, ೩ ಕಾರು, ೧೭ ಮೊಬೈಲ್, ೨೪ ಸಿಮ್, ೪೦,೬೭೦ ನಗದು ಹಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್ ಹಾಕೆ ತಿಳಿಸಿದ್ದಾರೆ.

























Discussion about this post