ಚಿಕ್ಕಮಗಳೂರು: ಮೊಹರಂ, ಗೌರಿ ಗಣೇಶ ಹಬ್ಬಗಳ ಸಾರ್ವಜನಿಕ ಸ್ಥಳದ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದ್ದು ಅನೇಕ ಷರತ್ತುಗಳನ್ನು ನಿಗಧಿಪಡಿಸಿ ನಿಯಮಾವಳಿ ರೂಪಿಸಿದೆ.
ಇದೇ ನಿಯಮಾವಳಿಯಡಿಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ಮನೆ, ದೇವಾಲಯಗಳಲ್ಲಿ ಮಾತ್ರ ಇಡತಕ್ಕದ್ದು, ಪ್ರತ್ಯೇಕವಾಗಿ ಪೆಂಡಲ್, ಚಪ್ಪರ ಹಾಕಿ ಇಡೊ ಹಾಗೇ ಇಲ್ಲ.
ಗಣಪತಿ ಮೂರ್ತಿ ದೇವಲಯದಲ್ಲಿ ಪ್ರತಿಷ್ಟಾಪನೆ ಮಾಡಿದ್ದಲ್ಲಿ ನಿತ್ಯ ಸ್ಯಾನಿಟೈಸ್ ಮಾಡತಕ್ಕದ್ದು. ವಿಗ್ರಹ ತರುವಾಗ, ವಿಸರ್ಜಿಸುವಾಗ ಮೆರವಣಿಗೆ ನಡೆಸುವಂತಿಲ್ಲ.
ಮೊಹರಂ ಹಬ್ಬದ ದಿವಸ ಪಂಜಾ/ಆಲಂ ಮೆರವಣಿಗೆಯ ಅವಕಾಶ ಇರುವುದಿಲ್ಲ
ಸಾರ್ವಜನಿಕ ಸಭ ಸಮಾರಂಭಕ್ಕೆ ಅವಕಾಶವೇ ಇಲ್ಲ
ಸ್ಮಸಾನಗಳಲ್ಲಿ ಶವ ಸಂಸ್ಕಾರಕ್ಕೆ ಮಾತ್ರ ಅವಕಾಶ, ಜನ ಸೇರುವ ಹಾಗೆ ಇಲ್ಲ
ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸತಕ್ಕದ್ದು ಎಂದು ಸರ್ಕಾರ ನಿಯಮಾವಳಿ ರೂಪಿಸಿದೆ.

























Discussion about this post