ಚಿಕ್ಕಮಗಳೂರು: ಕೊಳ್ಳೆಗಾಲ ಶಾಸಕ ಎನ್. ಮಹೇಶ್ ಕಾಂಗ್ರೆಸ್-ಜೆಡಿಎಸ್ ಕೈಬಿಟ್ಟಿದೆ, ಬಿಎಸ್ಪಿ ಹೊರಗೆ ಹಾಕಿದೆ, ಹಿಂದೂ ಧರ್ಮವನ್ನು ಮನುಧರ್ಮ ಎಂದು ಹೀನಾಯವಾಗಿ ಬೈದು ಜನಾಂಗ ಬೇರೆ ಮಾಡಿದವರು, ಅಂಥವರನ್ನು ಸೇರಿಕೊಂಡಿದ್ದಾರೆ ಎಂದು ಸ್ವಪಕ್ಷದ ವಿರುದ್ಧ ಮೂಡಿಗೆರೆ ಶಾಸಕ ಅಸಹನೆ ಹೊರಹಾಕಿದ್ದಾರೆ.
ಶಾಸಕ ಎನ್. ಮಹೇಶ್ ಇದೀಗ ನೆಲೆಗಾಗಿ ಬಿಜೆಪಿಯತ್ತ ಬಂದಿದ್ದಾರೆ, ಅವರು ಶಾಸಕರಾಗಿ ಬಂದಿದ್ದರಿಂದ ಸೇರಿಸಿಕೊಂಡಿದ್ದಾರೆ ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಅಣಕವಾಡಿದ್ದಾರೆ. ನಾನು ಸಚಿವರಿಗಿಂತ ಸಂತೋಷವಾಗಿದ್ದು, ಅವರಿಗಿಂತ ಹೆಚ್ಚು ಸರ್ವೀಸ್ ಮಾಡ್ತೇನೆ, ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಹಿಂದೂ ಧರ್ಮದ ಬಗ್ಗೆ ಹೀನಾಮಾನ ಬೈದಿದ್ದರು, ಅಲ್ಲದೆ ಹಿಂದೂ ಧರ್ಮವನ್ನ ಮನುಧರ್ಮ ಅಂತ ಜಾತಿ-ಧರ್ಮ ಎತ್ತಿಕಟ್ಟಿ ಶಾಸಕರಾಗಿದ್ದಾರೆ ಎಂದು ಅವರು ಹೇಳಿದರು.
ಹಿಂದೂ ಧರ್ಮ, ವೈದಿಕ ಧರ್ಮ ಬೈದಿದ್ದಕ್ಕೆ ಬಹುಮಾನ ಮಂತ್ರಿ ಮಾಡುವುದು ಎಂದು ಹೇಳುತ್ತಿಲ್ಲ, ನಮ್ಮ ಪಕ್ಷಕ್ಕಾಗಿ ದುಡಿದವರು ಮೂವರು ಇದ್ದೇವೆ, ಯಾರನ್ನಾದ್ರೂ ಮಾಡ್ತಾರೆ ಎಂಬ ಅಶಯ ವ್ಯಕ್ತಪಡಿಸಿದರು. ಈಗ ನಾನೇನಾದರೂ ಹೇಳುವುದು ಪಕ್ಷಕ್ಕೆ ಎಚ್ಚರಿಕೆಯಾದಂತೆ, ಹಿಂದೂ ಧರ್ಮವನ್ನು ಮನು ಧರ್ಮ ಎಂದವರನ್ನು ಮಂತ್ರಿ ಮಾಡುವುದಕ್ಕೆ ತಮ್ಮ ವಿರೋಧ ಹೊರ ಹಾಕಿದ್ದಾರೆ

























Discussion about this post