ಚಿಕ್ಕಮಗಳೂರು: ನಗರದ ಬಸವನಹಳ್ಳಿ ಮುಖ್ಯರಸ್ತೆಯ ಓಂಕಾರೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಸೇವಾ ಸಮಿತಿಯ ಗಣಪತಿ ವಿಸರ್ಜನೆ ಭನುವಾರ ವಿಜೃಂಭಣೆಯಿಂದ ನಡೆಯಿತು.
ಸಮಿತಿಯ ಪದಾಧಿಕಾರಿಗಳು, ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಮೆರವಣಿಗೆ ಆರಂಭವಾಗುತ್ತಿದ್ದಂತೆ ನೂರಾರು ಯುವಕರು ಕೇಸರಿ ರುಮಾಲು ಧರಿಸಿ ವಿನಾಯಕನಿಗೆ ಜೈಕಾರ ಹಾಕಿ ಶ್ರದ್ಧಾ ಭಕ್ತಿಯಿಂದ ಬೀಳ್ಕೊಟ್ಟರು.
ಮೆರವಣಿಗೆಯು ವಿಜಯಪುರ ಮುಖ್ಯರಸ್ತೆ, ಆಚಿಜನೇಯ ಸ್ವಾಮಿ ದೇವಸ್ಥಾನದ ರಸ್ತೆ, ಒಕ್ಕಲಿಗರ ಕಲ್ಯಾಣಮಂಟಪದ ಮುಂಭಾಗದ ರಸ್ತೆಗಳನ್ನು ಬಳಿಸಿ ಬಸವಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತದಿಂದ ದಂಟರಮಕ್ಕಿ ಕೆರೆ ತಲುಪಿತು.
ಗಣಪತಿ ಸಮಿತಿ ಸದಸ್ಯ ಸಂತೋಷ್ ಕೋಟ್ಯಾನ್ ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಳೆದ ೮ ವರ್ಷಗಳಿಂದ ಹಿಂದೂ ಮಹಾ ಗಣಪತಿ ಸೇವಾ ಸಮಿತಿ ಉತ್ಸವವನ್ನು ಆಚರಿಸಿಕೊಂಡು ಬಂದಿದೆ. ಕಳೆದ ಹತ್ತು ದಿನಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ ಎಂದರು.
ರಂಗಪೂಜೆ, ಮೂಡುಗಣಪತಿ ಸೇವೆ, ಹರಟೆಯಂತಹ ವಿಶಿಷ್ಠವಾದ ಕಾರ್ಯಕ್ರಮಗಳನ್ನು ಈ ಬಾರಿಯೂ ಹಮ್ಮಿಕೊಳ್ಳಲಾಗಿದೆ. ಇವು ಜನಮನ ಗೆದ್ದಿದೆ. ಪ್ರತಿ ವರ್ಷ ಇದೇ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಮಿತಿ ತೀರ್ಮಾನಿಸಿದೆ. ನಮ್ಮ ಸಂಸ್ಕೃತಿಗಳನ್ನು ಉಳಿಸುವ ಜೊತೆಗೆ ಸಮಾಜವನ್ನು ಒಗ್ಗೂಡಿಸುವುದು ಉತ್ಸವದ ಉದ್ದೇಶ ಎಂದರು.
ಸಮಿತಿ ಅಧ್ಯಕ್ಷ ಸದಾಶಿವಪ್ಪ, ಕಾರ್ಯದರ್ಶಿ ಕೃಷ್ಣ, ಸುಮಂತ್, ನಯನ, ಶ್ಯಾಮ, ನೂತನ್, ಪ್ರದೀಪ್, ರಾಜೇಂದ್ರ, ಮಂಜು, ಸಂಮೃದ್ಧ್ ಪೈ, ಗೌಡ್ರು ಮೆಸ್ ರಘು ಇತರರು ಭಾಗವಹಿಸಿದ್ದರು.

























Discussion about this post