ಚಿಕ್ಕಮಗಳೂರು: ಜಿಲ್ಲೆಯಲ್ಲಿನ ಮಲೆನಾಡಿಗೆ ಕಸ್ತೂರಿ ರಂಗನ್ ವರದಿ ಮಾರಕ ಎಂಬ ಹಿನ್ನೇಲೆಯಲ್ಲಿ ವರದಿಯಿಂದ ಗ್ರಾಮಗಳನ್ನು ಕೈಬಿಡುವಂತೆ ನಡೆಸಿದ್ದ ಹಕ್ಕೊತ್ತಾಯಕ್ಕೆ ಮೊದಲ ಹಂತದ ಜಯ ದಕ್ಕಿದೆ ಮೂಡಿಗೆರೆ ತಾಲ್ಲೂಕು ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೆಗ್ಗುಡ್ಲು ಗ್ರಾಮದ ಗ್ರಾಮಸ್ಥರು ಪಂಚಾಯಿತಿಗೆ ಮನವಿ ಸಲ್ಲಿಸಿ, ವರದಿಯಿಂದ ಗ್ರಾಮವನ್ನು ಹೊರಗೆ ಇಡುವಂತೆ ಒತ್ತಯಿಸಿದ್ದರು.
ಗ್ರಾಮ ಪಂಚಾಯಿತಿ ಸಭೆಯಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಇದೆ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ನಂತರದ ಬೆಳವಣಿಗೆಯಾಗಿ ಅರಣ್ಯ ಇಲಾಖೆ ಗ್ರಾಮವನ್ನು ವರದಿಯಿಂದ ಹೊರಗೆ ಇಡುವ ನಿರ್ಧಾರ ಕೈಗೊಂಡಿದೆ.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧೀನ ಕಾರ್ಯದರ್ಶಿಗಳು ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಪತ್ರ ಮೂಲಕ ಈ ಅಂಶ ತಿಳಿಯಪಡಿಸಿದ್ದಾರೆ.

























Discussion about this post