ಜಿನೀವಾ: ವಿಶ್ವದ 50ಕ್ಕೂ ಹೆಚ್ಚು ದೇಶಗಳಲ್ಲಿ ಪಸರಿಸಿರುವ ಓಮಿಕ್ರಾನ್ ಕೋವಿಡ್ ಪ್ರಭೇದಕ್ಕೆ ಕಡಿವಾಣ ಹಾಕಲು ಮೂರನೇ ಡೋಸ್ ಲಸಿಕೆ ಅಗತ್ಯವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದ್ದರಿಂದ ಶ್ರೀಮಂತ ದೇಶಗಳು ಹೆಚ್ಚುವರಿ ಲಸಿಕೆಯನ್ನು ಸಂಗ್ರಹಿಸಿಟ್ಟುಕೊಳ್ಳಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಒತ್ತಾಯಿಸಿದೆ.
ಬೂಸ್ಟರ್ ಡೋಸ್ ಬಗ್ಗೆ ಸುಸ್ಪಷ್ಟ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿಲ್ಲ. ಹೀಗಿರುವಾಗಿ ಸಿರಿವಂತ ದೇಶಗಳು ಲಸಿಕೆಯನ್ನು ಶೇಖರಿಸಿ ಇರಿಸಿಕೊಳ್ಳುವುದು ತರವಲ್ಲ. ಇದರಿಂದ ಜಾಗತಿಕವಾಗಿ ಲಸಿಕೆ ಅಸಮತೋಲನ ಉಂಟಾಗುತ್ತದೆ ಎಂದು ಡಬ್ಲ್ಯುಎಚ್ಒ ಹೇಳಿದೆ.
ಓಮಿಕ್ರಾನ್ ಪರಿಸ್ಥಿತಿ ಹೇಗೆಯೇ ಇರಲಿ ಆದರೆ, ಹೆಚ್ಚಿನ ಆದಾಯಹೊಂದಿರುವ ದೇಶಗಳು ಲಸಿಕೆಯನ್ನು ಶೇಖರ ಮಾಡಿಟ್ಟುಕೊಂಡರೆ ಜಾಗತಿಕ ಸರಬರಾಜು ಸರಪಳಿಯಲ್ಲಿ ವ್ಯತ್ಯಯವಾಗುತ್ತದೆ ಎಂದು ಡಬ್ಲ್ಯುಎಚ್ಒ ಲಸಿಕೆ ಅಭಿಯಾನದ ಮುಖ್ಯಸ್ಥೆ ಕೇಟ್ ಒಬ್ರಿಯಾನ್ ಹೇಳಿದ್ದಾರೆ.
ಅಮೆರಿಕ ಮೂಲದ ಫೈಜರ್-ಬಯೋಎನ್ಟೆಕ್ ಬೂಸ್ಟರ್ ಡೋಸ್ ಲಸಿಕೆಯು ಓಮಿಕ್ರಾನ್ ತಡೆಯಲು ಸಹಕಾರಿ ಎಂಬ ಪ್ರಾಥಮಿಕ ವರದಿ ಬಂದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಹೆಚ್ಚುವರಿ ಲಸಿಕೆಯ ಅಗತ್ಯ ಇದೆಯೇ ಎಂಬ ಬಗ್ಗೆ ಡಬ್ಲ್ಯುಎಚ್ಒ ಕೂಡ ಪರಿಶೀಲನೆ ನಡೆಸುತ್ತಿದೆ. ಈಗಲೇ ಈ ಬಗ್ಗೆ ಅಭಿಪ್ರಾಯಕ್ಕೆ ಬರುವುದು ತರವಲ್ಲ. ಕೆಲವು ಬಡ ದೇಶದಲ್ಲಿ ಇನ್ನು ಮೊದಲ ಡೋಸ್ ಲಸಿಕೆ ನೀಡುವುದೇ ಪೂರ್ಣವಾಗಿಲ್ಲ. ಇಂತಹ ದೇಶಗಳಲ್ಲಿ ರಿಸ್ಕ್ ಹೆಚ್ಚಿನ ಮಟ್ಟದಲ್ಲಿ ಇದೆ. ಹೀಗಿರುವಾಗ ಬಲಿಷ್ಠ ದೇಶಗಳು 3ನೇ ಡೋಸ್ಗೆ ಲಸಿಕೆ ಶೇಖರ ಮಾಡಿಕೊಂಡರೆ ದುರ್ಬಲ ದೇಶಗಳ ಜನರಿಗೆ ಅನ್ಯಾಯ ಆಗುತ್ತದೆ ಎಂದು ಕೇಟ್ ಹೇಳಿದ್ದಾರೆ.
On Omicron, WHO Shares A New Concern
ಇದನ್ನು ಓದಿ:ಎರಡು ಡೋಸ್ ಕೊರೋನಾ ಲಸಿಕೆ ತೆಗೆದುಕೊಂಡಿದ್ದರೆ ಒಮಿಕ್ರಾನ್ ತೀವ್ರತೆ ಕಡಿಮೆ
ಇದನ್ನೂ ಓದಿ: ಕೋವಿಡ್ ಸಮಯದಲ್ಲಿ ಡೆಂಘಿ ಹೆಚ್ಚಳದಿಂದ ಸಮಸ್ಯೆ ದ್ವಿಗುಣ; ಎಚ್ಚರ ಎಚ್ಚರ
Discussion about this post