ನವದೆಹಲಿ: ಶಿಕ್ಷಣ, ವ್ಯಾಪಾರ ಮತ್ತು ಪ್ರವಾಸೋದ್ಯಮ ಉದ್ದೇಶಗಳಿಗೆ ವಿದೇಶಕ್ಕೆ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಭಾರತದ ಕೋವಿಡ್-19 ಲಸಿಕಾ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆಗೆ 110 ದೇಶಗಳು ಒಪ್ಪಿಕೊಂಡಿದೆ ಎಂದು ಮೂಲಗಳಿಂದ ವರದಿಯಾಗಿದೆ. ಹಾಗಾಗಿ ಈ ದೇಶಗಳ ಪ್ರಯಾಣ ಸುಲಭವಾಗಲಿದೆ.
ಇದನ್ನೂ ಓದಿ: Farm Laws: ವಿವಾದಿತ ಕೃಷಿಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ
ವಿಶ್ವ ಆರೋಗ್ಯ ಸಂಸ್ಥೆ (WHO) ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡಿದ ಬಳಿಕ ಭಾರತ ಸಹಿತ ಹಲವು ದೇಶಗಳಲ್ಲಿ ಸಾವಿರಾರು ಕೋಟಿ ಜನ ಲಸಿಕೆ ಪಡೆದುಕೊಂಡಿದ್ದರು. ಜೊತೆಗೆ ವಿಶ್ವದ ಹಲವು ದೇಶಗಳೊಂದಿಗೆ ಕೇಂದ್ರ ಸರ್ಕಾರ ಉತ್ತಮ ಬಾಂಧವ್ಯ ಹೊಂದಿದೆ ಹಾಗಾಗಿ ನಮ್ಮ ದೇಶದಿಂದ ಆಸ್ಟ್ರೇಲಿಯಾ, ರಷ್ಯಾ, ಅಮೆರಿಕ, ಜರ್ಮನಿ ಸಹಿತ 110 ದೇಶಗಳಿಗೆ ಪ್ರಯಾಣಿಸಲು ಕೋವಿಡ್-19 ಲಸಿಕೆ ಪ್ರಮಾಣ ಪತ್ರ ಮಾನ್ಯತೆ ಪಡೆದುಕೊಂಡಿದೆ. ಇದರಿಂದಾಗಿ ಶಿಕ್ಷಣ, ವ್ಯಾಪಾರ ಮತ್ತು ಪ್ರವಾಸೋದ್ಯಮ ಉದ್ದೇಶಗಳ ಪ್ರಯಾಣ ಸುಲಭವಾಗಲಿದೆ.
ಇದನ್ನೂ ಓದಿ: ಬಾಡಿಗೆ ತಾಯ್ತನ ಮೂಲಕ ಅವಳಿ ಮಕ್ಕಳ ತಾಯಿಯಾದ ಪ್ರೀತಿ ಝಿಂಟಾ
WHO ಅನುಮೋದನೆ ನೀಡಿರುವ ಕೋವಿಡ್-19 ಲಸಿಕೆ ಪಡೆದ ಪ್ರಯಾಣಿಕರು ಪ್ರಯಾಣಿಸುವ ವೇಳೆ ಕೋವಿಡ್ ಲಸಿಕೆ ಪ್ರಮಾಣ ಪತ್ರ ಪಡೆದಿರುವುದು ಮುಖ್ಯ. ಇದೀಗ ಭಾರತದ ಕೋವಿಶೀಲ್ಡ್ ಪಡೆದ ಭಾರತೀಯ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳ ಮಾನ್ಯತೆಗೆ 110 ದೇಶಗಳು ಒಪ್ಪಿಕೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹಾಗಾಗಿ ಈ ದೇಶಗಳಿಗೆ ಪ್ರಯಾಣಿಸಲು ಯಾವುದೇ ನಿರ್ಬಂಧ ಇರುವುದಿಲ್ಲ.
ಇದನ್ನೂ ಓದಿ: e Paper – November 19, 2021
110 ದೇಶಗಳು ಲಸಿಕೆ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆಗೆ ಒಪ್ಪಿಕೊಂಡಿವೆ ಮತ್ತು ರಾಷ್ಟ್ರೀಯವಾಗಿ ಅಥವಾ WHO ಮಾನ್ಯತೆ ಪಡೆದ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆ ಕುರಿತು ಭಾರತದೊಂದಿಗೆ ಒಪ್ಪಂದವನ್ನು ಹೊಂದಿರುವ ಅನೇಕ ದೇಶಗಳಿವೆ. ಅದೇ ರೀತಿಯಲ್ಲಿ ಭಾರತದೊಂದಿಗೆ ಅಂತಹ ಒಪ್ಪಂದ ಹೊಂದಿಲ್ಲದ ರಾಷ್ಟ್ರಗಳು ಕೂಡಾ ಇವೆ.
ಇದನ್ನೂ ಓದಿ: ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆ ಅಲಂಕರಿಸಿರುವುದು ಅಚ್ಚರಿ ಮೂಡಿಸಿದೆ ಎಂದ ರಿಕಿ ಪಾಂಟಿಂಗ್
ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ರಾಷ್ಟ್ರೀಯವಾಗಿ ಅಥವಾ WHO ಮಾನ್ಯತೆ ಪಡೆದ ಲಸಿಕೆ ಹಾಕಿಸಿಕೊಂಡ ಭಾರತೀಯ ನಾಗರಿಕರಿಗೆ ವಿನಾಯಿತಿ ಸಿಗುತ್ತಿದೆ. ಇದರಿಂದ ಭಾರತೀಯರ ಅಂತರಾಷ್ಟ್ರೀಯ ಪ್ರಯಾಣ ಸಲಿಸಾಗಿದೆ.
110 countries agree to recognise India’s COVID vaccine certificate
Discussion about this post