ಬೆಂಗಳೂರು: ಅತಿವೃಷ್ಠಿ ಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಮಳೆಕಾಡು ಮೂಡಿಗೆರೆ ಸಹ ಸೇರ್ಪಡೆ ಮಾಡಲಾಗಿದೆ.
ಈ ಹಿಂದೆ ಬಿಡುಗಡೆ ಮಾಡಿದ್ದ ಪಟ್ಟಿ ಮತ್ತೆ ಪುನರ್ ಪರಿಶೀಲಿಸಿ ಇದೀಗ ನೂತನ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಒದರಲ್ಲಿ ಹೆಚ್ಚುವರಿಯಾಗಿ ಇನ್ನೂ ೨೨ ತಾಲ್ಲೂಕು ಸೇರಿಸಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಸಹ ಸೇರಿದೆ.
ತಮ್ಮ ಕ್ಷೇತ್ರದಲ್ಲಿ ಅತಿಯಾದ ಮಳೆ ಇದ್ದು ಸದರಿ ಅತಿವೃಷ್ಠಿ ಪಟ್ಟಿಗೆ ಸೇರಿಸಬೇಕೆಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿಧಾನ ಸೌದದ ಮುಂದೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಸಚಿವ ಆರ್. ಅಶೋಕ್ ಬಂದು ಭರವಸೆ ನೀಡಿದ ನಂತರವೇ ಪ್ರತಿಭಟನೆ ವಾಪಾಸ್ಸು ಪಡೆದಿದ್ದರು.
ಮರುಪರಿಷ್ಕರಣೆ ನಡೆಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೂಡಿಗೆರೆ ಜೊತೆಗೆ ಕಡೂರು ಸಹ ಸೇರಿರುವುದು ಗಮನಾರ್ಹ.

























Discussion about this post