ಹೊಸದಿಲ್ಲಿ: ತಮ್ಮ ಬ್ಯಾಂಕ್‌ಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವುದರಿಂದ ತಮ್ಮ ಹಣವನ್ನು ಪಡೆಯಲು ಸಾಧ್ಯವಾಗದ 1ಲಕ್ಷಕ್ಕೂ ಹೆಚ್ಚು ಠೇವಣಿದಾರರಿಗೆ ₹ 1,300 ಕೋಟಿಗಳನ್ನು ಪಾವತಿಸಲಾಗಿದೆ. ಇನ್ನೂ 3 ಲಕ್ಷ ಠೇವಣಿದಾರರು ಇಂತಹ ಖಾತೆಗಳಲ್ಲಿ ಸಿಲುಕಿರುವ ಹಣವನ್ನು ಸ್ವೀಕರಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಭಾನುವಾರ ಸಂಕಷ್ಟದಲ್ಲಿರುವ ಬ್ಯಾಂಕುಗಳಲ್ಲಿ ತಮ್ಮ ಹಣವನ್ನು ಪಡೆಯಲು ಸಾಧ್ಯವಾಗದ ಖಾತೆದಾರರಿಗೆ ವಿಮಾ ಮೊತ್ತವನ್ನು ಸರಿದೂಗಿಸಲು ವೈಯಕ್ತಿಕವಾಗಿ ಚೆಕ್‌ಗಳನ್ನು ಹಸ್ತಾಂತರಿಸಿ, ದೇಶಕ್ಕೆ, ಬ್ಯಾಂಕಿಂಗ್ ವಲಯಕ್ಕೆ ಮತ್ತು ಕೋಟಿಗಟ್ಟಲೆ ಬ್ಯಾಂಕ್ ಖಾತೆದಾರರಿಗೆ ಇಂದು ಬಹಳ ಮುಖ್ಯವಾದ ದಿನವಾಗಿದೆ ಎಂದು ತಿಳಿಸಿದರು.
ಕೇಂದ್ರವು ಆಗಸ್ಟ್‌ನಲ್ಲಿ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ ಕಾಯ್ದೆಗೆ ತಿದ್ದುಪಡಿ ಮಾಡಿತು. ಅಂತಹ ಹೊಣೆಗಾರಿಕೆಯು ಉದ್ಭವಿಸಿದ 90 ದಿನಗಳಲ್ಲಿ ಖಾತೆದಾರರು ತಮ್ಮ ವಿಮೆ ಮಾಡಿದ ಠೇವಣಿ ಮೊತ್ತವನ್ನು ಪಡೆಯಬಹುದು ಎಂದು ಈ ತಿದ್ದುಪಡಿ ಖಾತ್ರಿ ಪಡಿಸಿದೆ.
1300 crore rupees

























Discussion about this post