ನವದೆಹಲಿ: ಕರ್ನಾಟಕ ಸೇರಿದಂತೆ ೧೭ ರಾಜ್ಯಗಳಿಗೆ ೯,೮೭೧ ಕೋಟಿ ರೂ. ನಂತರದ ವಿತರಣಾ ಆದಾಯ ಕೊರತೆಯ (PDRD)ಅನುದಾನದ ೬ನೇ ಕಂತನ್ನು ಕೇಂದ್ರ ಬಿಡುಗಡೆ ಮಾಡಿದೆ ಎಂದು ಹಣಕಾಸು ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಅರ್ಹ ರಾಜ್ಯಗಳಿಗೆ,ಈವರೆಗೆ ಪ್ರಸ್ತುತ ಹಣಕಾಸು ವರ್ಷದಲ್ಲಿ PDRD ಅನುದಾನ ಒಟ್ಟು ೫೯,೨೨೬ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸದರಿ ಅನುದಾನವು ಸಂವಿಧಾನದ ಪರಿಚ್ಛೇದ ೨೭೫ ಅಡಿಯಲ್ಲಿ ಒದಗಿಸಲಾಗಿದೆ.
ಹದಿನೈದನೆಯ ಹಣಕಾಸು ಆಯೋಗವು ಪಿಡಿಆರ್ ಡಿ ಅನುದಾನಕ್ಕೆ ಶಿಫಾರಸ್ಸು ಮಾಡಿದ್ದ ರಾಜ್ಯಗಳಲ್ಲಿ ಕರ್ನಾಟಕ ಸೇರಿದಂತೆ ಆಂಧ್ರ, ಅಸ್ಸಾಂ, ಹರಿಯಾಣ, ಹಿಮಾಚಲ, ಕೇರಳ, ಮಣಿಪುರ, ಪಶ್ಚಿಮ ಬಂಗಾಳ, ಮೇಘಾಲಯ ಸೇರಿದೆ.
೧೫ನೇ ಹಣಕಾಸು ಆಯೋಗ ೨೦೨೧-೨೨ರ ಆರ್ಥಿಕ ವರ್ಷದಲ್ಲಿ ೧೭ ರಾಜ್ಯಗಳಿಗೆ ಒಟ್ಟು ೧,೧೮,೪೫೨ ರೂ. ಹಂಚಿಕೆಗೆ ಶಿಫಾರಸ್ಸು ಮಾಡಿತ್ತು. ಇದರಲ್ಲಿ ಈಗ ೫೯,೨೨೬ ಕೋಟಿ ಅಂದರೆ ಹೆಚ್ಚು ಕಡಿಮೆ ಅರ್ಧದಷ್ಟು ಮೊತ್ತ ಬಿಡುಗಡೆಯಾಗಿದೆ.
೨೦೨೧-೨೨ರ ಅವಧಿಯಲ್ಲಿ ೧೭ ರಾಜ್ಯಗಳ ಕಂದಾಯ ಖಾತೆಗಳ ಅಂತರ ಪೂರೈಸಲು ೧೫ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ನಡೆಯಲಿದ್ದು, ಮಾಸಿಕ ಕಂತಿನಲ್ಲಿ ಅನುದಾನ ಬಿಡುಗಡೆಯಾಗಲಿದೆ ಎಂದು ಸಹ ಉಲ್ಲೇಖಿಸಲಾಗಿದೆ.
Discussion about this post