ಕನ್ನಡನಾಡಿ ಸುದ್ದಿಜಾಲ: ಟಾಲಿವುಡ್ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಶನಿವಾರ ಅಧಿಕೃತವಾಗಿ ತಮ್ಮ ವಿಚ್ಛೇದನವನ್ನು ಘೋಷಿಸಿದ್ದ ಹಿನ್ನೇಲೆಯಲ್ಲಿ ಇದೀಗ ನಾಗ ಚೈತನ್ಯ ಹಾಗೂ ಅಕ್ಕಿನೇನಿ ಕುಟುಂಬದ ಕಡೆಯಿಂದ 200 ಕೋಟಿ ಜೀವನಾಂಶವನ್ನು ಸಮಂತಾ ನಿರಾಕರಿಸಿದ್ದಾರೆ.
ಸಮಂತಾ ಹಾಗೂ ನಾಗ ಚೈತನ್ಯ ಶನಿವಾರ ಪರಸ್ಪರ ದೂರವಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿವಾಹವಾಗಿ ಕೇವಲ ನಾಲ್ಕೆ ವರ್ಷ ಕಳೆದಿದ್ದು, ಐದನೇ ವರ್ಷ ತುಂಬುತ್ತಿದ್ದಂತೆ ಇಬ್ಬರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನೆ ಪಡೆದುಕೊಂಡಿದ್ದಾರೆ.
ಸದ್ಯ ಸಮಂತಾಗೆ ಜೀವನಾಂಶವಾಗಿ 200 ಕೋಟಿ ರೂ.ವನ್ನು ನೀಡಲು ಅಕ್ಕಿನೇನಿ ಕುಟುಂಬ ಮುಂದಾಗಿತ್ತು.
ಈ ಕುರಿತಂತೆ ಸಮಂತಾ ನನಗೆ ಜೀವನಾಂಶ ಬೇಡ ಹಾಗೂ ನಾಗ ಚೈತನ್ಯ ಅಥವಾ ಅವರ ಕುಟುಂಬದವರಿಂದ ಒಂದು ಪೈಸೆ ಕೂಡ ತೆಗೆದುಕೊಳ್ಳಲು ಬಯಸುವುದಿಲ್ಲ ಅಂತ ಹೇಳಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.
ನಾನು ಬಯಸಿದ್ದು ಪ್ರೀತಿ ಅಷ್ಟೇ ಎಂದು ವಿಚ್ಛೇದಿತ ಪತ್ನಿ ಸಮಾಂತಾ ಹೇಳಿದ್ದು ಇಬ್ಬರ ನಡುವಿನ ವಿರಸಕ್ಕೆ ಪುಷ್ಟಿ ಕೊಟ್ಟಿದೆ.

























Discussion about this post