ನವದೆಹಲಿ: ವೈವಿಮಾನಿಕ ಸೇವೆಯಲ್ಲಿ ದೊಡ್ಡ ಕಂಪನಿಯಾಗಿರುವ ಸ್ಪೇಸ್ಜೆಟ್ ತನ್ನ ಲಾಜಿಸ್ಟಿಕ್ (ಸರಕು ಸಾಗಣೆ) ಘಟಕವಾದ ಸ್ಪೇಸ್ ಎಕ್ಸ್ಪ್ರೆಸ್ 2024ರ ಹೊತ್ತಿಗೆ ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ವಿಮಾನಗಳನ್ನು ಬಳಕೆ ಮಾಡಲು ಚಿಂತಿಸಿದೆ. ಅಮೆರಿಕ ಮೂಲದ ಬೈ ಏರೋಸ್ಪೇಸ್ (ಡೆನ್ವರ್ ಸೆಂಟಿನಿಯಲ್) ಇಂಥ ವಿಮಾನಗಳನ್ನು ಅಭಿವೃದ್ಧಿ ಪಡಿಸಿಕೊಡಲಿದ್ದು, ಇದಕ್ಕಾಗಿ ಸ್ಪೇಸ್ಎಕ್ಸ್ಪ್ರೆಸ್ ಮತ್ತು ಬೈ ಏರೋಸ್ಪೇಸ್ ಮಧ್ಯೆ ಪ್ರಾಥಮಿಕ ಒಪ್ಪಂದ ಏರ್ಪಟ್ಟಿದೆ.
ಕೊಲೊರಾಡೊ ಮೂಲದ ಬೈ ಏರೋಸ್ಪೇಸ್ ಜತೆ ಈ ಕುರಿತು ಒಡಂಬಡಿಕೆ ಮಾಡಿಕೊಂಡಿದೆ. ಈ ಸಂಸ್ಥೆಯು 2024ರ ವೇಳೆಗೆ ಐದು ಎಲೆಕ್ಟ್ರಿಕ್ ವಿಮಾನಗಳನ್ನು ಪೂರೈಸಲಿದೆ. 2026ರಲ್ಲಿ ಮತ್ತೈದು ಇಂಥ ವಿಮಾನಗಳನ್ನು ಸಿದ್ಧಪಡಿಸಿಕೊಡಲಾಗಿದೆ ಎಂದು ಸ್ಪೇಸ್ಎಕ್ಸ್ಪ್ರೆಸ್ನ ಸಿಇಒ ಸಂಜೀವ್ ಗುಪ್ತಾ ಹೇಳಿದ್ದಾರೆ. ಈ ವಿಮಾನಗಳ ತಯಾರಿಕೆಗೆ ಸ್ಪೇಸ್ಎಕ್ಸ್ಪ್ರೆಸ್ 30ರಿಂದ 50 ಕೋಟಿ ರೂಪಾಯಿ (4 ರಿಂದ 6 ಮಿಲಿಯನ್ ಡಾಲರ್) ಹೂಡಿಕೆ ಮಾಡಲಿದೆ ಎನ್ನಲಾಗಿದೆ.
ಇಂಗಾಲ ಉಗುಳದ ವಿಮಾನಗಳ ಬಳಕೆ ಬಗ್ಗೆ ಭಾರತದ ಪಿಫೋರ್ ಗ್ರೂಪ್ ಜತೆ ಸ್ಪೇಸ್ಎಕ್ಸ್ಪ್ರೆಸ್ ಒಪ್ಪಂದ ಮಾಡಿಕೊಂಡಿದ್ದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಸ್ಪೇಸ್ಎಕ್ಸ್ಪ್ರೆಸ್ ಈ ನಿಧರ್ಧಾರವನ್ನು ಬದಲಿಸಿ ಎಲೆಕ್ಟ್ರಿಕಲ್ ವಿಮಾನದಲ್ಲಿ ಮುಂಚೂಣಿಯಾದ ಏರೋಸ್ಪೇಸ್ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ.
ಏರೋಸ್ಪೇಸ್ ಮಾನವ ರಹಿತ ವಿಮಾನಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಿದೆ. ಜತೆಗೆ ಎರಡು ಆಸನದ ಇ-ಫ್ಲೈಯರ್2, ನಾಲ್ಕು ಆಸನದ ಇ-ಫ್ಲೈಯರ್ 4, ಎಂಟರಿಂದ 12 ಸೀಟಗಳ ಇ-ಫ್ಲೈಯರ್ 800 ಬಿಸಿನೆಸ್ ಜೆಟ್ಗಳನ್ನು ತಯಾರಿಸಿದೆ.
SpiceXpress Eyeing Electrification of Freighter Fleet by 2024
ಇದನ್ನು ಓದಿ: ಈ ವರ್ಷ 11 ಬಿಲಿಯನ್ ಡಾಲರ್ ತೆರಿಗೆ ಪಾವತಿಸುವ ಎಲಾನ್ ಮಸ್ಕ್
ಇದನ್ನೂ ಓದಿ: ನೇಪಾಳದಲ್ಲಿ ವಿಮಾನವನ್ನು ದಬ್ಬಿದ ಪ್ರಯಾಣಿಕರು; ವಿಡಿಯೋ ವೈರಲ್
Discussion about this post