ನವದೆಹಲಿ: ದೇಶದ ಗಡಿಯಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪೂರ್ವ ಮತ್ತು ಪಶ್ಚಿಮ ಗಡಿಯಲ್ಲಿನ ರಸ್ತೆಗಳ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇದರ ಕಾಮಗಾರಿಯನ್ನು ಸೇನೆಯ ಗಡಿ ರಸ್ತೆ ಸಂಸ್ಥೆ (ಬಿಆರ್ಒ) ನಿರ್ವಹಿಸುತ್ತಿದೆ. ಇಂಥ ಯೋಜನೆಯಲ್ಲಿ ಪ್ರಸ್ತುತ ರ್ಪೂಣಗೊಂಡಿರುವ 27 ಯೋಜನೆಗಳಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಉದ್ಘಾಟನೆಗೊಂಡ ರಸ್ತೆಯಲ್ಲಿ ಅನೇಕ ರಸ್ತೆಗಳು ಚೀನಾದ ಗಡಿ ಬಳಿಯಲ್ಲೂ ನಿರ್ಮಾಣ ಆಗಿವೆ. 24 ಸೇತುವೆಗಳ ನಿರ್ಮಾಣವನ್ನು ಒಳಗೊಂಡ ಈ 27 ಯೋಜನೆಗಳಿಗೆ 2,245 ಕೋಟಿ ರೂಪಾಯಿ ವೆಚ್ಚ ಆಗಿದೆ.
ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಇಂದು ಸರ್ಮಪಿತವಾದ ರಸ್ತೆಗಳ ಪೈಕಿ ಬಹುಮಹತ್ವದ ಗಡಿ ರಸ್ತೆ ಪೂರ್ವ ಲಡಾಖ್ನ ಚಿಸುಮ್ಲೆ&ದೆಂಚೋಕ್ ರಸ್ತೆಯೂ ಒಂದು. ಇದು 20 ತಿಂಗಳು ಭಾರತ- ಚೀನಾ ಮಧ್ಯೆ ಬಿಕ್ಕಟ್ಟು ಉಂಟಾಗಿದ್ದ ಪ್ರದೇಶದಲ್ಲಿ ಇದೆ. ಇಂಥ ಸ್ಥಳಗಳಿಗೆ ತ್ವರಿತ ಸಂಪರ್ಕ ಕಲ್ಪಿಸುವ ಸುಸ್ಥಿರ ರಸ್ತೆಗಳು ದೇಶಕ್ಕೆ ಅವಶ್ಯಕ ಎಂದರು.
ಪ್ರಸ್ತುತದ ಪರಿಸ್ಥಿತಿಯನ್ನು ಅವಲೋಕಿಸಿದರೆ ಗಡಿಯಲ್ಲಿ ಚಕಮಕಿ ನಡೆಯುವ ಸಂಭವವನ್ನು ನಿರಾಕರಿಸಲಾಗದು. ಇಂಥ ಪರಿಸ್ಥಿತಿ ಉದ್ಭವವಾದರೆ ಗಡಿ ಮುಂಚೂಣಿ ನೆಲೆಗಳಿಗೆ ತ್ವರಿತವಾಗಿ ಸೇನಾಪಡೆ, ಸಾಮಗ್ರಿಗಳನ್ನು ತಲುಪಿಸಬೇಕಾಗುತ್ತದೆ ಇದಕ್ಕೆ ಸುಸ್ಥಿತ ರಸ್ತೆಗಳು ಅಗತ್ಯ ಎಂದರು.
ಗಡಿಯಲ್ಲಿನ ಮೂಲಸೌಕರ್ಯ ಅಭಿವೃದ್ಧಿಯು ಸೇನೆಯ ಕಾರ್ಯತಂತ್ರದ ಭಾಗವಾಗಿದೆ. ಇಂಥ ಕಾರ್ಯವನ್ನು ಕ್ಲಿಷ್ಟಕರ ವಾತಾವರಣದಲ್ಲೂ ಬಿಆರ್ಒ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭೂಸೇನಾ ಮುಖ್ಯಸ್ಥ ಜನರಲ್ ನರಾವಣೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಇತರ ಅಧಿಕಾರಿಗಳು ಭಾಗವಹಿಸಿದ್ದರು.
Rajnath Singh Inaugurates 27 BRO Projects
ಇದನ್ನು ಓದಿ: ಗಡಿಯಲ್ಲಿ ಮೌಲಸೌಕರ್ಯ ವೃದ್ಧಿಸುತ್ತಿರುವ ಚೀನಾ: ಸೇನಾಧಿಕಾರಿಗಳ ಸಭೆಯಲ್ಲಿ ಭಾರತ ಕಳವಳ
ಇದನ್ನೂ ಓದಿ: ಗಡಿಯಲ್ಲಿ ಕಟ್ಟೆಚ್ಚರ ವಹಿಸಲು ಭದ್ರತಾಪಡೆಗಳಿಗೆ ಸೂಚಿಸಿದ ರಕ್ಷಣಾ ಮಂತ್ರಿ ರಾಜನಾಥ ಸಿಂಗ್
Discussion about this post