ಚಿಕ್ಕಮಗಳೂರು: ಕೋವಿಡ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ೩೦ ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಬುಧವಾರ ಜಿಲ್ಲಾದ್ಯಂತ ೪೮ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಓರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ೧೮, ಕಡೂರು ೩, ತರೀಕೆರೆ ೭, ಮೂಡಿಗೆರೆ ೯, ನರಸಿಂಹ ರಾಜಪುರ ೧, ಕೊಪ್ಪ ೭ ಹಾಗೂ ಶೃಂಗೇರಿ ತಾಲ್ಲೂಕಿನ ೩ಮಂದಿಯಲ್ಲಿ ಸೋಂಕು ಕಾಣಿ ಸಿಕೊಂಡಿದೆ. ಇಂದು ಪತ್ತೆಯಾದ ಸೋಂಕಿತರಲ್ಲಿ ೪೪ಮಂದಿಯನ್ನು ಹೋಮ್ ಐಸೋ ಲೇಶನ್ಗೆ ಒಳಪಡಿಸಲಾಗಿದೆ. ಇಬ್ಬರು ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಇಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕಮಗಳೂರು ತಾಲ್ಲೂಕಿನ ೮೦ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿ ದ್ದು, ಜಿಲ್ಲೆಯಲ್ಲಿ ಇದುವರೆಗೂ ೪೯,೮೭೪ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ೪೮,೮೯೨ಮಂದಿ ಗುಣಮುಖರಾಗಿದ್ದು ೫೬೭ಮಂದಿಯಲ್ಲಿ ಸೋಂಕು ಸಕ್ರೀಯವಾಗಿದೆ. ಇ ದುವರೆಗೂ ೩೮೫ಮಂದಿ ಮೃತಪಟ್ಟಿದ್ದಾರೆ.

























Discussion about this post