ಪೋರ್ಟ್ ಔ ಪ್ರಿನ್ಸ್: ಹೈತೀ ದೇಶದಲ್ಲಿ 7.2 ರ ತೀವ್ರತೆಯ ಭೂಕಂಪ ಸಂಭವಿಸಿದ್ದು ಅಪಾರ ಸಾವು – ನೋವು ಸಂಭವಿಸಿದ್ದು ಕನಿಷ್ಠ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಶೋಧ ಕಾರ್ಯ ತೀವ್ರಗತಿಯಲ್ಲಿ ಸಾಗಿದೆ.
ಶನಿವಾರ ಬೆಳಿಗ್ಗೆ ಸುಮಾರು 8:3೦ರ ಹೊತ್ತಿಗೆ ಭೂಕಂಪ ನಡೆದಿದ್ದು ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ, ನಾಗರೀಕ ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥ ಜೆರ್ರಿ ಚಾಂಡ್ಲರ್ ,ಆಸ್ಪತ್ರೆಗಳು ಜನರ ಶುಶ್ರೂಷೆಗೆ ಒದ್ದಾಡುತ್ತಿವೆ, ಕನಿಷ್ಠ ಮೂರು ಪೆಸ್ಟಲ್, ಕೊರೈಸಲ್ ಮತ್ತು ರೋಸಾಲ್ಟ್ ಪುರಸಭೆ ಗಳು ಭರ್ತಿಯಾಗಿವೆ ಎಂದಿದ್ದಾರೆ.
ಹೈತಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು, ಜನರನ್ನು ರಕ್ಷಿಸುತ್ತಿರುವ ಕಾರ್ಯಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Discussion about this post