ಕಾಸರಗೋಡು: ೮ನೇ ತರಗತಿ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದು ಕಿರುಕುಳ ಕೊಟ್ಡಿದ್ದ ಹಿನ್ನೇಲೆ, ಈ ಮೆಸೇಜ್ ವೈರಲ್ ಆಗಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ನಡೆದಿದ್ದು, ಇದಕ್ಕೆ ಕಾರಣಕರ್ತನಾದ ಆಡೂರ ಮೂಲದ ಶಿಕ್ಷಕನನ್ನು ಮುಂಬೈನಲ್ಲಿ ಬಂಧಿಸಿದ್ದಾರೆ.
ಆರೋಪಿಯ ಹೆಸರು ಉಸ್ಮಾತ್ (೨೫) ಕಾಸರಗೋಡಿನ ಮೇಲ್ಪರಂಬ ಎಂಬಲ್ಲಿ ಖಾಸಗಿ ಶಾಲಾ ಶಿಕ್ಷಕನಾಗಿದ್ದಾತ. ಈತನ ಕಿರುಕುಳದಿಂದ ೮ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಗೆ ಶರಣಾಗಿದ್ದಳು ಎನ್ನಲಾಗಿದೆ.
ಈತ ವಿದ್ಯಾರ್ಥಿನಿ ಗೆ ಮಾನಸಿಕ ಕಿರುಕುಳ ನೀಡಲು ಆಕೆಯೊಂದಿಗೆ ಸಂಭಾಷಣೆ ನಡೆಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ. ಇದೆಲ್ಲಾ ಬಹಳ ಮುಜುಗರ ಉಂಟುಮಾಡಿದ್ದು, ಮಾನಸಿಕವಾಗಿ ನೊಂದ ಬಾಲಕಿ ಆತ್ಮಹತ್ಯೆ ಗೆ ಶರಣಾಗಿದ್ದಳು. ಪೊಲೀಸರು ಫೊಕ್ಸೋ ಪ್ರಕರಣ ದಾಖಲಿಸುತ್ತಲೇ ಕಣ್ಮರೆಯಾಗಿದ್ದ ಈತನನ್ನು ಮೊಬೈಲ್ ಟ್ರೇಸ್ ಮಾಡೋ ಮೂಲಕ Special branch police ಮುಂಬೈಗೆ ತೆರಳಿ ಅರೆಸ್ಟ್ ಮಾಡಿದ್ದರು.
ವಿಚಾರಣೆ ವೇಳೆ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ ಆರೋಪಿ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಶಕ್ಕೆ ಪಡೆದಿದ್ದಾರೆ.

























Discussion about this post