ಅಮೇರಿಕಾ ದೇಶದ ಮೇಲೆ ನಡೆಸಿದ ಸೆಪ್ಟೆಂಬರ್೧೧, ಆಲ್ ಖೈದಾ ಧಾಳಿಗಳು
ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದಲ್ಲಿ ನಂಭಿಕೆ ಇಟ್ಟವರನ್ನು ವಿಭಜಿಸಲು ಸೋತಿವೆ ಎಂದು ಬಿಟೀಷ್ ಪ್ರಧಾನಮಂತ್ರಿ ಬೊರಿಸ್ ಜಾನ್ಸನ್ ಹೇಳಿದ್ದಾರೆ. ಇದೇ ಘಟನೆಯ ೨೦ನೇ ವಾರ್ಷಿಕೋತ್ಸವದ ದಿವಸದಂದು ಅವರು ಈ ಸಂದೇಶ ತಿಳಿಸಿದ್ದಾರೆ.
ಹತ್ತಿರ ಹತ್ತಿರ ೩ಸಾವಿರ ಜನರು ಅಸುನೀಗಿದರು, ೨೬೦೦ ಜನರು ವರ್ಲ್ಡ್ ಟ್ರೇಡ್ ಸೆಂಟರ್, ನ್ಯೂಯಾರ್ಕ್ ನಲ್ಲೇ ಇದ್ದರು. ಹೈಜಾಕ್ ನಂತರ ಏರ್ ಪ್ಲೇನ್ ಗಳನ್ನು ವಶಪಡಿಸಿಕೊಂಡಿದ್ದರು, ವಾಷಿಂಗ್ಟನ್ ವರ್ಲ್ಡ್ ಟ್ರೇಡ್ ಟ್ವಿನ್ ಟವರ್ಸ್ ಮತ್ತು ವಾಷಿಂಗ್ಟನ್ ಹೊರಗಿನ ಪೆಂಟಗನ್ ಮೇಲೆ ಧಾಳಿ ನಡೆಸಲಾಗಿತ್ತು. ಇದರಲ್ಲಿ ೬೭ ಬ್ರಿಟಿಷ್ ದೇಶವಾಸಿಗಳು ಸಹ ಮರಣ ಹೊಂದಿದ್ದರು ಎಂದು ತಿಳಿಸಿದ್ದಾರೆ.
೨೦ ವರ್ಷದ ಅವಧಿಯ ಮುನ್ನೋಟದಲ್ಲಿ, ಉಗ್ರವಾದಿಗಳು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೇಲಿನ ನಮ್ಮ ನಂಭಿಕೆಯನ್ನು ಅಲ್ಲಾಡಿಸಲು ಸೋತಿವೆ ಎಂದು ಜಾನ್ಸನ್ ಒಂದು ವಿಡಿಯೋದಲ್ಲಿ ಹೇಳಿದ್ದಾರೆ. ಅದಕ್ಕೆ ಬದಲಾಗಿ, ಉಗ್ರವಾದಿಗಳು ನೋವು ಮತ್ತು ದುಃಖದ ಹೊರೆಯನ್ನು ನಮ್ಮ ಮೇಲೆ ಹೊರಿಸಿದರು ಎಂದಿದ್ದಾರೆ.
’ನಮ್ಮ ದೇಶಗಳನ್ನು ಅವರು ಇಬ್ಬಾಗ ಮಾಡಲು ಸೋತಿದ್ದಾರೆ ಅಥವಾ ನಮ್ಮ ಮೌಲ್ಯಗಳನ್ನು ನಾಶಪಡಿಸಿ ಶಾಶ್ವತ ಭಯ ಹುಟ್ಟುಹಾಕಲು ಸಹ’ ಎಂದು ಸಹ ಹೇಳಿದ್ದಾರೆ. ಲಂಡನ್ ಒಲಂಪಿಕ್ ಪಾರ್ಕ್ ನಲ್ಲಿ ನಡೆಸಲಾದ ಒಂದು ಕಾರ್ಯಕ್ರಮದಲ್ಲಿ ಈ ಮಾತುಗಳ ವಿಡಿಯೋ ಮಾಡಲಾಗಿದೆ. ಇದೇ ಸ್ಥಳದಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಟವರ್ಸ್ ನ ಒಂದು ಶಿಲ್ಪಕಲಾಕೃತಿಯನ್ನು ಸ್ಮರಣಾರ್ಥವಾಗಿ ಕಟ್ಟಿಸಲಾಗಿದೆ.
ಆಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ೯/೧೧ರ ಧಾಳಿಗಳನ್ನು ಆಫ್ಘಾನಿಸ್ತಾನದಿಂದಲೇ ಯೋಜಿಸಿದ್ದನು. ೨೦೦೧ ರಲ್ಲಿ ತಾಲಿಬಾನ್ ಸರ್ಕಾರವನ್ನು ಅಮೇರಿಕಾ ಅಲ್ಲಿ ಉರುಳಿಸಿ, ಹೆಚ್ಚುಕಡಿಮೆ ೨ ದಶಕಗಳ ಕಾಲ ಅದೇ ದೇಶದಲ್ಲಿ ನೆಲೆಸಿತ್ತು.
Discussion about this post