ಶಿವಮೊಗ್ಗ: ಇಂದು ಬಿಜೆಪಿ ಸಮಾವೇಶದಲ್ಲಿ ಪ್ರಚೋದನೆ ಮೂಡಿಸುವ ಹೇಳಿಕೆ ನೀಡುವ ಮೂಲಕ ಸಚಿವ ಈಶ್ವರಪ್ಪ ವಿವಾದದ ಕೇಂದ್ರಬಿಂದುವಾಗಿದ್ದಾರೆ.
‘ಬಿಜೆಪಿಯವರನ್ನು ಯಾರಾದರೂ ಮೈಮುಟ್ಟಿ ನೋಡಲಿ?’ ಎಂದು ಹಲ್ಲು ಮಸೆಯುವ ಮಾತನಾಡಿದ್ದಾರೆ ಈಶ್ವರಪ್ಪ.
‘ನಾವಾಗಿ ನಾವು ಕೊಲೆ ಮಾಡಲ್ಲ, ಹಿಂಸೆ ಮಾಡಲ್ಲ, ನಮ್ಮ ಸುದ್ದಿಗೆ ಬಂದರೆ ಬ್ರಹ್ಮ ಬಂದರೂ ಬಿಡಲ್ಲ. ನಮ್ಮ ತಂಟೆಗೆ ಬಂದ್ರೆ ಎರಡನ್ನೂ ತೆಗೆಯುತ್ತೇವೆ’ ಎಂದು ಮೌಖಿಕ ಎಚ್ಚರಿಕೆ ನೀಡಿರುವುದು ಸಾರ್ವಜನಿಕರ ಹುಬ್ಬೇರುವಂತೆ ಮಾಡಿದೆ.
‘ಬಿಜೆಪಿ ಕಾರ್ಯಕರ್ತರಿಗೆ ಯಾವುದರಲ್ಲಿ ಹೊಡೆಯುತ್ತಾರೋ ಅದರಲ್ಲೇ ಹೊಡೆದು ತೆಗೆದುಬಿಡಿ, ಹೇಳುವುದು ಬೇಡ’ ಎಂಬ ಹೊಡಿ ಕಡಿ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಪಕ್ಷದ ಬಲಿಷ್ಟತೆ ಬಗ್ಗೆ ಮಾತನಾಡುತ್ತಾ ‘ಕಮಲ ಹಾಸನ್ ಸೋಲಿಸಿದ್ದು ಇದೇ ಬಿಜೆಪಿ, ಎಲ್ಲಿಂದ ಬಂತು ಈ ಶಕ್ತಿ’ ಎಂದು ಹೇಳಿದರು.

























Discussion about this post