ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿಯ ಕಳೆಬರ ಸಿಕ್ಕಿದ್ದು, ಇತರೆ ಹುಲಿಯ ಜೊತೆಗೆ ಕಾದಾಟವೇ ಕಾರಣ ಎಂದು ತಿಳಿದುಬಂದಿದೆ.
ಕುಂದಕೆರೆ ವಲಯದ ಮಂಗಳ ಶಾಖೆಯ ಎಲಚ್ಚಟ್ಟಿ ಗಸ್ತಿನ ಆಲದ ಮರದಹಳ್ಳ ಅರಣ್ಯ ಪ್ರದೇಶದ ಬಳಿ ಅಂದಾಜು ನಾಲ್ಕರಿಂದ ಐದು ವರ್ಷದ ಹುಲಿ ಅಸುನೀಗಿದ್ದು, ಹುಲಿ ಮೈ ಮೇಲೆ ಗಾಯಗಳು ಪತ್ತೆಯಾಗಿದೆ. ಬಹುಶಃ ಇದು ಇತರೆ ಹುಲಿಯೊಂದಿಗಿನ ಹೋರಾಟದ ಪೆಟ್ಟುಗಳು ಎಂದು ಅಂದಾಜಿಸಲಾಗಿದೆ.
ಹುಲಿಯ ಉಗುರುಗಳು, ಹಲ್ಲುಗಳು, ದೇಹದ ಭಾಗಗಳು ಸುರಕ್ಷಿತವಾಗಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

























Discussion about this post