ಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕರ್ನಾಟಕದಾದ್ಯಂತ ’ಅಹಿಂದ’ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ಚಳುವಳಿಯನ್ನು ಪ್ರಾರಂಭಿಸಲಿದ್ದಾರೆ ಈ ಕುರಿತು ಪಕ್ಷದ ಕಾರ್ಯಕರ್ತರು ಸ್ಪಷ್ಟನೆ ನೀಡಿದ್ದು, ದಮನಿತ ವರ್ಗಗಳ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆಗಳು ಸ್ಪಷ್ಟವಾಗಿದೆ ಎಂದು ತಿಳಿಸಿವೆ.
ಮುಂಬರುವ ೨೦೨೧ರ ವಿಧಾನಸಭಾ ಚುನಾವಣೆಗೆ ಮೊದಲು ಈ ಚಳುವಳಿ ಪ್ರಾರಂಭವಾಗಲಿದ್ದು, ಅದಕ್ಕೆ ಮುನ್ನ ಜಾತಿವಾರು ಜನಗಣತಿಯ ವರದಿ ಬಿಡುಗಡೆ ಮಾಡುವಂತೆ ಮಾಜಿ ಸಚಿವ ಹೆಚ್. ಸಿ. ಮಹದೇವಪ್ಪ, ಸಿ.ಎಮ್. ಇಬ್ರಾಹಿಂ ಅವರುಗಳು ಸಿದ್ದರಾಮಯ್ಯನವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ.
ಜನಗಣತಿ ಸಮಿತಿಯು ತಿರಸ್ಕರಿಸುವ ವರದಿಯಲ್ಲಿ ಮುಸ್ಲಿಂಮರು ಕೆಳವರ್ಗದ ನಂತರ ಕರ್ನಾಟಕದ ಜನಸಂಖ್ಯೆಯ ವಿಷಯದಲ್ಲಿ ಎರಡನೆಯ ಸ್ಥಾನದಲ್ಲಿದ್ದಾರೆ ಎಂದು ಸೂಚಿಸಿತ್ತು. ಜಾತಿ-ಗಣತಿ ಎಂದು ಕರೆಯಲ್ಪಟ್ಟ ಸಾಮಾಜಿಕ-ಆರ್ಥಿಕ-ಶಿಕ್ಷಣ ಸಮೀಕ್ಷೆಯು ಪೂರ್ಣಗೊಂಡ ನಂತರ ವಿವಾದ ಉಂಟಾಗಿತ್ತು.
ಇದೇ ಜಾತಿ ಗಣತಿಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ ೧೬೮ ಕೋಟಿ ರೂ. ಖರ್ಚು ಮಾಡಿದ್ದರೂ ಸಹ ಇದರ ಫಲಿತಾಂಶಗಳು ಇಂದಿಗೂ ವಿಧಾನಸಭೆಯಲ್ಲೂ ಪ್ರಸ್ತುತಪಡಿಸದೆ, ಸಾರ್ವಜನಿಕರ ಮುಂದೆ ಗೌಪ್ಯವಾಗಿಯೇ ಇವೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ’ನನ್ನ ಅಧಿಕಾರಾವಧಿಯಲ್ಲಿ ಅಪೂರ್ಣವಾಗಿದ್ದ ಜಾತಿ-ಗಣತಿಯನ್ನು ನಂತರದ ಮುಖ್ಯಮಂತ್ರಿಗಳಾದರೂ ಬಿಡುಗಡೆಗೊಳಿಸಬಹುದಿತ್ತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜನಗಣತಿಯು ಜನಸಮುದಾಯಗಳ ಸ್ಥಿತಿಗತಿಯ ಕುರಿತು ಸ್ಪಷ್ಟ ಮಾಹಿತಿ ಹೊಂದಿದ್ದು, ಈಗಾಗಲೇ ಅತ್ಯಂತ ಹಿಂದುಳಿದ ಜಾತಿಗಳ ಜಾಗೃತಿ ವೇದಿಕೆಯ ಪದಾಧಿಕಾರಿಗಳು ನನ್ನನ್ನು ಭೇಟಿ ಮಾಡಿದಾಗ ನ್ಯಾಯಾಲಕ್ಕೆ ತೆರಳಲು ಸಲಹೆ ನೀಡಿರುವುದಾಗಿ ಸಹ ಅವರು ತಿಳಿಸಿದ್ದಾರೆ. ಜಾತಿ ಗಣತಿಯಲ್ಲಿ ಪರಿಶಿಷ್ಠ ಜಾತಿಗಳು/ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಜನಸಂಖ್ಯೆ ಕರ್ನಾಟಕ ಪ್ರಬಲ ಲಿಂಗಾಯತ, ಒಕ್ಕಲಿಗ ಜಾತಿಗಳಿಗಿಂತ ಹೆಚ್ಚು ಇದೆ ಎಂದು ಸೂಚಿಸುತ್ತಿದೆ ಎನ್ನಲಾಗಿದೆ.
ಅಹಿಂದ ಶಕ್ತಿ ಎಂದೇ ಗುರುತಿಸಲ್ಪಟ್ಟಿರುವ ಸಿದ್ದರಾಮಯ್ಯನವರು ’ಅಹಿಂದ ಚಳುವಳಿ’ ಆರಂಭಿಸುವ ಮೂಲಕ ದಮನಿತ ಸಮುದಾಯಗಳ ಬೆಂಬಲವನ್ನು ನಿರೀಕ್ಷಿಸುತ್ತಿದ್ದಾರೆ.

























Discussion about this post