ಬೆಂಗಳೂರು: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿ ಆದ ಮೇಲೆ ಪ್ರಥಮ ಬಾರಿ ರಾಜ್ಯ ಪ್ರವಾಸ ಮಾಡುತ್ತಿದ್ದು ಕೇಂದ್ರ ಸರ್ಕಾರದ ನೂತನ ಕಾರ್ಯಕ್ರಮ ಜನಾಶೀರ್ವಾದ ಯಾತ್ರೆ. ರೈತರೊಂದಿಗೆ ಚರ್ಚೆ ಹಾಗೂ ನ್ಯಾಯಬೆಲೆ ಅಂಗಡಿ ವ್ಯಾಕ್ಸಿನ್ ಕೇಂದ್ರ ಕೇಂದ್ರಗಳಿಗೆ ಭೇಟಿ ಆಯಾ ಜಿಲ್ಲೆಯ ಪಕ್ಷದ ಕಾರ್ಯಕರ್ತರು ಹಾಗೂ ದೇವಸ್ಥಾನಗಳು ಹಾಗೂ ಮಠ-ಮಂದಿರಗಳ ಭೇಟಿ ನೀಡಿ ಶ್ರೀಗಳ ದರ್ಶನ ಮಾಡಿ ಆಶೀರ್ವಾದ ಪಡೆಯಲಿದ್ದಾರೆ.
ಕೇಂದ್ರ ಸಚಿವರ ಈ ನಾಲ್ಕು ದಿನದ ಪ್ರವಾಸದಲ್ಲಿ ಮೈಸೂರು-ಮಂಡ್ಯ –ಚಾಮರಾಜನಗರ -ಹಾಸನ- ಚಿಕ್ಕಮಗಳೂರು -ಉಡುಪಿ ಜಿಲ್ಲೆಗಳಿಗೆ ಆಗಸ್ಟ್19ರವರೆಗೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದಲ್ಲಿ ಆಯಾ ಜಿಲ್ಲೆ ರೈತರೊಂದಿಗೆ ಚರ್ಚೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳಾದ ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆ. ವ್ಯಾಕ್ಸಿನ್ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಶ್ರೀ ಆದಿಚುಂಚನಗಿರಿ ಶ್ರೀಗಳು. ಮೈಸೂರು ಸುತ್ತೂರು ಮಠದ ಶ್ರೀಗಳು. ಮೈಸೂರು ಅರಮನೆ ರಾಜಮಾತೆ ಭೇಟಿ ಶ್ರೀ ಗಣಪತಿ ಸಚ್ಚಿದಾನಂದ ಸಚ್ಚಿದಾನಂದ ಆಶ್ರಮ. ಚಿಕ್ಕಮಗಳೂರು ಜಿಲ್ಲೆಯ ಶ್ರೀ ರಂಭಾಪುರಿ ಶ್ರೀಗಳು. ಶೃಂಗೇರಿ ಶಾರದಾ ಪೀಠದ ಶ್ರೀಗಳ ಭೇಟಿ. ನೀಡಿ ಆಶೀರ್ವಾದ ಪಡೆಯಲಿದ್ದಾರೆ.
ಇದೇ ಸಂದರ್ಭದಲ್ಲಿ ಮೈಸೂರು ಚಾಮುಂಡೇಶ್ವರಿ ದೇವಸ್ಥಾನ – ನಂಜನಗೂಡು ದೇವಸ್ಥಾನ ಹಾಗೂ ಆದಿಚುಂಚನಗಿರಿ ದೇವಸ್ಥಾನ ಜಿಲ್ಲೆಯ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ರೇಣುಕಾ ಹಾಗೂ ವೀರಭದ್ರೇಶ್ವರ ಮತ್ತು ಶ್ರೀ ಶೃಂಗೇರಿ ಶಾರದಾಂಬೆ ದರ್ಶನ ನಂತರ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ.
ಸಚಿವರ ಪ್ರವಾಸದ ಸಮಯ
ಚಿಕ್ಕಮಗಳೂರು ಜಿಲ್ಲೆ ಪ್ರವಾಸ:
ಆಗಸ್ಟ್ 17 2021, ಹಾಸನದಿಂದ ರಸ್ತೆ ಮಾರ್ಗವಾಗಿ 6:30 ಕ್ಕೆ ಚಿಕ್ಕಮಗಳೂರು ಪ್ರವೇಶ, ಪಕ್ಷದ ಪದಾಧಿಕಾರಿಗಳೊಂದಿಗೆ ಚರ್ಚೆ ಹಾಗೂ ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ.
ಆಗಸ್ಟ್ 18 2021: ಬೆಳಿಗ್ಗೆ 9:00 ಗಂಟೆಗೆ ಗಣ್ಯರಿಂದ ಮಾಲಾರ್ಪಣೆ, 9.30 ಕ್ಕೆ ಪತ್ರಕರ್ತರೊಂದಿಗೆ ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿ. ನಂತರ ಪಕ್ಷದ ಕಚೇರಿಯಲ್ಲಿ ಅಭಿನಂದನಾ ಸಮಾರಂಭ. ಬೆಳಿಗ್ಗೆ 10.30 ಕ್ಕೆ ವ್ಯಾಕ್ಸಿನೇಷನ್ ಸೆಂಟರ್ ಬೇಟಿ. ಹಾಗೂ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ.
ಬೆಳಿಗ್ಗೆ 11ಗಂಟೆಗೆ ಆಲ್ದೂರಿನಲ್ಲಿ ಜನಾಶೀರ್ವಾದ ಯಾತ್ರೆ. ಮಧ್ಯಾಹ್ನ1:30 ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ದರ್ಶನ ಮಾಡಿ ಆಶೀರ್ವಾದ ಪಡೆದು .ಶ್ರೀ ಪೀಠದಲ್ಲಿ ಶ್ರೀ ರೇಣುಕಾ ಮತ್ತು ಶ್ರೀ ವೀರಭದ್ರ ದೇವರ ದರ್ಶನ ಪಡೆದು ನಂತರ ಮಠದಲ್ಲಿ ಪ್ರಸಾದ.
3.15ಕ್ಕೆ ಶೃಂಗೇರಿ ಆಗಮನ: ಶ್ರೀ ಶೃಂಗೇರಿ ಶಾರದಾ ದೇವಿ ದರ್ಶನ ಹಾಗೂ ಶೃಂಗೇರಿ ಶ್ರೀಗಳ ದರ್ಶನ ಮಾಡಿ. ಆಶೀರ್ವಾದ ಪಡೆದು ಜಿಲ್ಲೆಯಿಂದ ನಿರ್ಗಮನ, ನಂತರ ರಸ್ತೆ ಮಾರ್ಗವಾಗಿ ಉಡುಪಿ ಜಿಲ್ಲೆ ಪ್ರವೇಶ ಹೆಬ್ರಿ- ಮಣಿಪಾಲ್-ಮೂಲಕ ಪ್ರವಾಸ ಮಾಡಿ ಉಡುಪಿಯಲ್ಲಿ ವಾಸ್ತವ್ಯ
ಆಗಸ್ಟ್ 19 2021: ಬೆಳಗ್ಗೆ 8:00 ಗೆ ಕೃಷ್ಣ ದೇವಸ್ಥಾನ ದರ್ಶನ ದೊಂದಿಗೆ ಮಠದ ಸ್ವಾಮೀಜಿ ದರ್ಶನ ಪಡೆದು ಜಿಲ್ಲೆಯ ಮೀನುಗಾರರ ರೊಂದಿಗೆ ಚರ್ಚೆ., ಇದಿಷ್ಟು ಕೇಂದ್ರ ಸಚಿವರ ನಾಲ್ಕು ದಿವಸದ ರಾಜ್ಯ ಪ್ರವಾಸ ಆಗಿದ್ದು ಸಮಯ ಸ್ವಲ್ಪ ವ್ಯತ್ಯಾಸ ಆಗಬಹುದಾಗಿದೆ ಎಂದು ತಿಳಿದುಬಂದಿದೆ.

























Discussion about this post