ಹೊಸಪೇಟೆ (ವಿಜಯನಗರ): ಹಂಪೆಯ ಗತವೈಭವ ವೀಕ್ಷಣೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕುಟುಂಬ ಸಮೇತರಾಗಿ ಆಗಮಿಸಲಿದ್ದಾರೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ತಿಳಿಸಿದೆ. ಇವರ ಜೊತೆಗೆ ಕೆಲವು ಅಧಿಕಾರಿಗಳು ಸಹ ಇರುತ್ತಾರೆ.
ಹಂಪಿಯ ತುಂಗಭದ್ರಾ ಜಲಾಶಯ, ವಿರೂಪಾಕ್ಷ ದೇವಾಲಯ ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಲಿರುವುದರಿಂದ ಅಲ್ಲಿನ ಸ್ಮಾರಕಗಳ ಸ್ವಚ್ಚತಾ ಕಾರ್ಯಗಳು ಭರದಿಂದಸಾಗಿವೆ. ಶಿಥಿಲಗೊಂಡ ಮೆಟ್ಟಿಲುಗಳನ್ನು ದುರಸ್ತಿ ಮಾಡಲಾಗುತ್ತಿದೆ.
ಗುರುವಾರದಿಂದ ಮೂರು ದಿವಸಗಳ ಕಾಲ ಹಂಪಿಯಲ್ಲೇ ಉಳಿದುಕೊಳ್ಳಲಿದ್ದು ಐತಿಹಾಸಿಕ ವಸ್ತು ವಿಚಾರಗಳ ರಸಗ್ರಹಣ ನಡೆಸಲಿದ್ದಾರೆ.
ವಾರಾಂತ್ಯದಲ್ಲಿ ಈಗಾಗಲೇ ನಿರ್ಬಂಧ ಹೇರಿದ್ದು, ಭದ್ರತೆ ದೃಷ್ಟಿಯಿಂದ ಇನ್ನಷ್ಟು ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ.

























Discussion about this post