ಮಂಗಳೂರು: ಬೈಕಂಪಾಡಿಯ ರಮೇಶ್ ಸುವರ್ಣ (೪೫) ಪತ್ನಿ ಗುಣ ಸುವರ್ಣ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡ ದಂಪತಿಗಳಾಗಿದ್ದಾರೆ.
ರಮೇಶ್ ಸುವರ್ಣ ಕೊರೊನಾ ಸೋಂಕಿನ ಭಯದಿಂದ, ಅದರ ಪರಿಣಾಮಗಳ ಬಗ್ಗೆ ಭಯಪಟ್ಟು ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದರು, ಇದರ ಕುರಿತು ಪೋಲೀಸ್ ಕಮೀಷನರ್ ಗೆ ಸೇರಿದಂತೆ ತನ್ನ ಅಣ್ಣ,ಇತರೆ ಹಲವು ಗೆಳೆಯರು, ಸಂಬಂಧಿಕರಿಗೆ ವಾಯ್ಸ್ ಮೆಸೇಜ್ ಕಳಿಸಿರುತ್ತಾರೆ. ತಕ್ಷಣವೇ ಅಲರ್ಟ್ ಆದ ಪೋಲೀಸ್ ಕಮೀಷನರ್ ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಮನವಿ ಮಾಡಿದ್ದಾರೆ.
ಕಮೀಷನರ್ ಸಾಹೇಬರು ಇಲಾಖೆಯ ಪೋಲೀಸರಿಗೆ ಸಹ ಮಾಹಿತಿ ಕಳಿಸಿ ಬೈಕಂಪಾಡಿ ಬಳಿ ಇರುವವರು ಕೂಡಲೇ ರಕ್ಷಣೆ ಮಾಡಲು ಸೂಚನೆ ನೀಡುತ್ತಾರೆ. ಕೇವಲ ಇಪ್ಪತ್ತು ನಿಮಿಷಗಳಲ್ಲಿ ಪೋಲೀಸರ್ ತಂಡ ಬೈಕಂಪಾಡಿಯ ರಹೇಜಾ ಅಪಾರ್ಟ್ಮೆಂಟ್ ತಲುಪಿ, ದಂಪತಿ ಆತ್ಮಹತ್ಯೆ ಮಾಡಿಕೊಂಡ ಸ್ಥಳ ತಲುಪಿದ್ದಾರೆ.
ಅಷ್ಟರೊಳಗೆ ಮನೆಯ ಹಾಲ್ ನಲ್ಲೇ ದಂಪತಿ ಈ ಕೃತ್ಯ ನಡೆಸಿದ್ದರು. ಪೋಲೀಸ್ ಕಮೀಷನರ್, ಇಲಾಖೆ ಸೇರಿ ಅಷ್ಟು ಪ್ರಯತ್ನ ಪಟ್ಟರೂ ದುಡುಕಿನ ನಿರ್ಧಾರದಿಂದ ದಂಪತಿಯನ್ನು ಪಾರು ಮಾಡಲು ಆಗಲೇ ಇಲ್ಲ. ತಮ್ಮ ಅನಾರೋಗ್ಯ ಪೀಡಿತ ಬದುಕಿನಲ್ಲಿ ಕೊರೊನಾ ಮತ್ತು ಬ್ಲಾಕ್ ಫಂಗಸ್ ಪರಿಣಾಮಗಳ ಬಗ್ಗೆ ತಿಳಿದಿದ್ದು ತಮ್ಮಿಬ್ಬರ ಬದುಕು ಅಂತ್ಯಗೊಳಿಸಲು ನಿರ್ಧರಿಸಿರುವುದಾಗಿ ಸುಧೀರ್ಘ ಪತ್ರ ಬರೆದಿದ್ದಾರೆ.
ಇಬ್ಬರ ಅಂತ್ಯ ಸಂಸ್ಕಾರದ ಖರ್ಚಿಗೆ ಒಂದು ಲಕ್ಷ ರೂ. ನಗದು ಹಣ ಇಟ್ಟಿರುತ್ತಾರೆ. ಮನೆಯ ಒಳಗಿನ ವಸ್ತುಗಳನ್ನು ಬಡವರಿಗೆ ದಾನ ಮಾಡಲು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

























Discussion about this post