ಬಳ್ಳಾರಿ: ಸಿಎಂ ಬಸವರಾಜ ಬೊಮ್ಮಾಯಿಯವರು ಜಿಲ್ಲೆಗೆ ಆಗಮಿಸಿದ್ದರೂ ಕೂಡಾ ಸಚಿವ ಆನಂದ್ ಸಿಂಗ್ ಮುನಿಸು ಮುರಿದು ಮುಖ ತೋರಿಸುವ ಗೋಜಿಗೆ ಹೋಗಿಲ್ಲ. ಜಿಂದಾಲ್ ಏರ ಪೋರ್ಟ್ ಗೆ ಬಂದಿದ್ದ ಸಿಎಂ ನಂತರ ಹೆಲಿಕಾಪ್ಟರ್ ನಲ್ಲಿ ಅಲಮಟ್ಡಿಗೆ ತೆರಳಿ ಬಾಗಿನ ಅರ್ಪಿಸಿದರು.
ಹಿಂದಿನ ದಿನ ಶುಕ್ರವಾರ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಸಚಿವರು ಬೇಟಿ ಮಾಡಿದ್ದ ಸ್ವಾಗತ ಕೋರಿದ್ದರು. ಸಿಎಂ ಜಿಲ್ಲೆಗೆ ಬಂದರೂ ಕ್ಯಾರೇ ಮಾಡದೆ ತಮ್ಮ ಕ್ಷೇತ್ರದ ಕಾರ್ಯಗಳಲ್ಲಿ ಸಚಿವ ಆನಂದ್ ಬ್ಯುಸಿಯಾಗಿದ್ದರು, ಬೆಳಿಗ್ಗೆ ಖಾಸಗಿ ಬ್ಯಾಂಕ್ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿದ್ದರು.
ಪ್ರಭಾವಿ ಖಾತೆಗಾಗಿ ಸಚಿವ ಆನಂದ್ ಸಿಂಗ್ ಮುನಿಸಿಕೊಂಡಿದ್ದಾರೆ, ಅವರ ಕೋಪ ಇನ್ನೂ ಶಮನವಾಗಿಲ್ಲ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಕೇಳಿಬಂದಿದೆ.

























Discussion about this post