ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಬೆಸ್ಟ್ ಏರ್ ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಅಂಡ್ ಸೆಂಟ್ರಲ್ ಏಷ್ಯಾ’ (Best Airport Staff In India and Central Asia) ಪ್ರಶಸ್ತಿ ಲಭಿಸಿದೆ. ಸ್ಕೈ ಟ್ರಾಕ್ಸ್ ವರ್ಲ್ಡ್ ಏರ್ ಪೋರ್ಟ್ ಅವಾರ್ಡ್ (Sky Tracks world Airport Award) ನಡೆಸಿದ್ದ ಸಮೀಕ್ಷೆಯಲ್ಲಿ ಗ್ರಾಹಕರು ಇತರೆ ವಿಮಾನಯಾನ ಸೇವೆಗಳ ಸೆಬ್ಬಂದಿಗಿಂತ ಕೆಐಎ (KIA) ವಿಮಾನ ನಿಲ್ದಾಣ ಸೇವೆ ಅತ್ಯುತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್, BIAL (Bangalore International Airport Ltd)ನ ಸಿಇಒ ಹರಿ ಮರಾರ್ ಮಾತನಾಡಿ ಧನ್ಯವಾದ ಅರ್ಪಿಸಿದ್ದಾರೆ. ‘ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ನಮ್ಮೆಲ್ಲರಿಗೂ ಸಂತಸ ತಂದಿದೆ. ಇದರಿಂದ ಸಿಬ್ಬಂದಿ ಕಾರ್ಯಕ್ಷಮತೆಗೆ ಪ್ರಶಸ್ತಿ ದಕ್ಕಿದೆ, ಮತ ಹಾಕಿದ ಎಲ್ಲರಿಗೂ ವಂದನೆಗಳು’ ಎಂದಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ಮಟ್ಟದ ನಿಲ್ದಾಣವು ಒಂದೇ ವರ್ಷದಲ್ಲಿ ಏರ್ ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ (ACI) ನಿಂದ ವಿಶ್ವದ ವಾಯ್ಸ್ ಆಫ್ ದಿ ಕಸ್ಟಮರ್’ (Voice of the customer) ಹೆಗ್ಗಳಿಕೆಗೆ ಪಾತ್ರವಾಗಿದೆ.ಇದರ ಜೊತೆಗೆ ಎಸಿಐ, ಏರ್ ಪೋರ್ಟ್ ಸರ್ವೀಸ್ ಕ್ವಾಲಿಟಿ ಅವಾರ್ಡ್ (ACI, Airport Service Quality Award), ಎಕ್ಸಲೆನ್ಸ್ ಫಾರ್ ದಿ ಇಯರ್ ಪ್ರಶಸ್ತಿ (Excellence For The Year Award) ಸಹ ಪಡಿದಿದೆ ಎಂದು ಪ್ರಕಟಣೆ ತಿಳಿಸಿದೆ..

























Discussion about this post