ಚಿಕ್ಕಬಳ್ಳಾಪುರ: ನಾನಾಕಡೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.ಪ್ರವಾಸಿಗರ ಹಿತದೃಷ್ಟಿಯಿಂದ ಯಿಂದ ಜಿಲ್ಲಾಧಿಕಾರಿ ಲತಾ ಅವರು ಈ ಅದೇಶ ಹೊರಡಿಸಿದ್ದಾರೆ.
ಕಳೆದ ರಾತ್ರಿ ಭಾರೀ ಮಳೆ ಸುರಿದಿದ್ದು, ನಂದಿಬೆಟ್ಟಕ್ಕೆ ತೆರಳುವ ರಂಗಪ್ಪ ವೃತ್ತದ ಬಳಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಅಲ್ಲದೇ ಇನ್ನೂ ಹಲವು ಕಡೆಗಳಲ್ಲಿ ಗುಡ್ಡ ಕುಸಿತದ ಭೀತಿಯೂ ಇದೆ.
ಗುಡ್ಡದಲ್ಲಿನ ರಸ್ತೆಗಳ ಮೇಲೆ ವಾಹನಗಳ ಓಡಾಟ ಒತ್ತಡ ಉಂಟುಮಾಡುವುದರಿಂದ ಸಮಸ್ಯೆ ಉಲ್ಬಣವಾಗುವ ಆಧ್ಯತೆ ಇತ್ತು. ಜೊತೆಗೆ ಪ್ರವಾಸಿಗರ ಭೇಟಿಯಿಂದ ಇನ್ನಷ್ಟು ಸಮಸ್ಯೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲೀಗ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್. ಅವರು ನಂದಿ ಬೆಟ್ಟ ಬಂದ್ ಮಾಡಿ ಆದೇಶಿಸಿದ್ದಾರೆ.
ಜಿಲ್ಲಾಡಳಿತ ನಿಷೇಧ ಹೇರಿದ ಬೆನ್ನಲ್ಲೇ ನಂದಿ ಬೆಟ್ಟವನ್ನು ಬಂದ್ ಮಾಡಲಾಗಿದ್ದೆ. ಅಲ್ಲದೆ ಪ್ರವಾಸಿಗರನ್ನು ವಾಪಾಸ್ ಕಳುಹಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ರಸ್ತೆ ದುರಸ್ತಿ ಕಾರ್ಯವನ್ನು ತುರ್ತಾಗಿ ನೆರವೇರಿಸುವಂತೆ ಸಹ ಜಿಲ್ಲಾಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ. ಹೀಗಾಗಿ ಮುಂದಿನ 20 ದಿನಗಳ ಕಾಲ ನಂದಿ ಬೆಟ್ಟ ಬಂದ್ ಆಗಲಿದೆ.

























Discussion about this post