ಮೈಸೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೇಲೆ, ಮೈಸೂರಿನ ಕುಕ್ಕರಹಳ್ಳಿ ಕೆರೆ ಹಾಗೂ ಮಾನಸ ಗಂಗೋತ್ರಿ ಆವರಣಕ್ಕೆ ಸಂಜೆ ೬-೩೦ರ ನಂತರ ಪ್ರವೇಶ ನಿರ್ಭಂಧ ವಿಧಿಸಲಾಗಿದೆ. ಮೈಸೂರು ವಿವಿ ಆಡಳಿತ ಮಂಡಳಿ ಸುರಕ್ಷತಾ ದೃಷ್ಠಿಯಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಈ ಕಟ್ಟುನಿಟ್ಟಿನ ನಿಯಮ ಹೇರಿಕೆ ಮಾಡಿದೆ.
ಇದರ ಫಲವಾಗಿ ಭದ್ರತಾ ಸಿಬ್ಬಂಧಿಯವರು ಸಂಜೆ ೬-೯ರವರೆಗೆ ಗಸ್ತು ತಿರುಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಮಾನಸ ಗಂಗೋತ್ರಿಯ ಆವರಣದಲ್ಲಿ ಸಂಜೆ ೬-೩೦ರ ನಂತರ ಹೆಣ್ಣುಮಕ್ಕಳು ಏಕಾಂಗಿಯಾಗಿ ಕೂರುವುದು, ತಿರುಗುವುದನ್ನು ಸಹ ನಿಷೇಧಿಸಲಾಗಿದೆ. ವಿವಿಗೆ ಪೊಲೀಸ್ ಇಲಾಖೆಯ ಮೌಖಿಕ ನಿರ್ದೇಶನ ನೀಡಿದ್ದು, ಇದಕ್ಕೆ ಪ್ರತಿಯಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಮೈಸೂರು ವಿವಿ ಕುಲಸಚಿವರಿಂದ ಸುತ್ತೋಲೆ ಪ್ರಕಟಿಸಲಾಗಿದೆ.

























Discussion about this post