ಕೊಟ್ಟಿಗೆಹಾರ: ಹುಲಿ ದಾಳಿಯಿಂದ ಹಸುವೊಂದು ಮೃತಪಟ್ಟ ಘಟನೆ ಭಾರತಿಬೈಲ್ ಗ್ರಾಮದಲ್ಲಿ ನಡೆದಿದೆ.
ಹತ್ತು ದಿನದ ಹಿಂದೆ ಕರುಹಾಕಿದ ಹಸುಮೇಯಲು ಬಿಟ್ಟಿದ್ದಾಗ ದಾಳಿ ನಡೆಸಿ ಹಸುವನ್ನು ಬಲಿತೆಗೆದುಕೊಂಡಿದೆ. ಬಿ ಹೊಸಳ್ಳಿಯ ಅನುಸೂಯ ಎಂಬುವವರ ಹಸು ಇದಾಗಿದ್ದು ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಬಿ ಹೊಸಳ್ಳಿ, ಭಾರತಿಬೈಲ್ ಭಾಗದಲ್ಲಿ ಈ ಹಿಂದೆಯೂ ಹುಲಿದಾಳಿಗೆ ಅನೇಕ ಜಾನುವಾರುಗಳು ಬಲಿಯಾಗಿದ್ದು ಕೃಷಿಪ್ರದೇಶಗಳಲ್ಲಿ ಹುಲಿ ಹೆಜ್ಜೆಗಳು ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕ ಮೂಡಿಸಿದೆ.
ಈ ಹಿಂದೆ ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ಭೇಟಿನೀಡಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಹುಲಿ ದಾಳಿಯಿಂದ ಜಾನುವಾರುಗಳು ಸಾವಿಗೀಡಾಗುತ್ತಿದ್ದು, ಅರಣ್ಯಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

























Discussion about this post