ಉಡುಪಿ/ ಮಂಗಳೂರು: ಈಗಾಗಲೇ ರಾಜ್ಯದ ಹಲವೆಡೆ ಮಳೆ ಸುರಿಯುತ್ತಿದ್ದು, ಸೆಪ್ಟೆಂಬರ್ ೧ರವರೆಗೆ ಆರೆಂಜ್ ಅಲರ್ಟ್ (ORANGE ALERT) ಘೋಷಿಸಲಾಗಿದೆ. ಇದರಿಂದಾಗಿ ಮೀನುಗಾರಿಗೆ ಪ್ರತಿಕೂಲ ವಾತಾವರಣ ಒದಗಿದ್ದು, ಸಂಕಷ್ಟ ಇದಿರಾಗಿದೆ.
ಆಳ ಸಮುದ್ರಕ್ಕೆ ತೆರಳಿದ್ದ ಮೀನುಗಾರರು ಹವಾಮಾನ ವೈಪರೀತ್ಯದ ಕಾರಣ, ಮರಳಿದ್ದಾರೆ. ಮೀನುಗಳು ಕ್ಷೀಣಿಸಿರುವುದು ಒಂದೆಡೆಯಾದರೆ, ಹವಾಮಾನ ವೈಪರಿತ್ಯ ಸಹ ಮೀನುಗಾರರನ್ನು ತಲ್ಲಣಿಸುವಂತೆ ಮಾಡಿದೆ. ಸಬ್ಸಿಡಿ ಹಣ, ಸರ್ಕಾರದ ಯೋಜನೆಗಳು ಸಹ ಸಹಾಯಕ್ಕೆ ಬರುತ್ತಿಲ್ಲ, ಮಳೆಯಿಂದಾಗಿ ಇನ್ನಷ್ಟು ಸಮಸ್ಯೆ ಎದುರಿಸುತ್ತಿದೆ.
ಚಂಡಮಾರುತದ ಅಬ್ಬರ ಇರುವುದರಿಂದ ಸಮುದ್ರಕ್ಕೆ ಇಳಿದರೆ ಪ್ರಾಣ, ಆಸ್ಥಿಪಾಸ್ತಿ ಹಾನಿ ಸಂಭವ ಹೆಚ್ಚಿದ್ದು, ಹವಾಮಾನ ಇಲಾಖೆ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಎಚ್ಚರಿಕೆ ನೀಡಿದೆ.

























Discussion about this post