ದಾವಣಗೆರೆ: ಬಿಎಸ್ ವೈ ಏತಕ್ಕಾಗಿ ರಾಜಿನಾಮೆ ಕೊಟ್ಟಿದಾರೆ, ಇವರೇ ಕಿತ್ತುಕೊಂಡ್ರಾ? ಅವರೇ ಕೊಟ್ರಾ? ಬ್ರಷ್ಟಾಚಾರ ಆರೋಪದಿಂದ ಸಿಎಂ ಸ್ಥಾನ ಕಿತ್ತುಕೊಂಡ್ರಾ? BJP ಪಕ್ಷ ಕಟ್ಟಿದವರನ್ನ ಕಸದ ಬುಟ್ಟಿಗೆ ಹಾಕುವ ಸಂಸ್ಕೃತಿ ಬಿಜೆಪಿಯದ್ದು ಹೀಗಾಗಿ ಅಡ್ವಾನಿ, ಮುರುಳಿ ಮನೋಹರ ಜೋಷಿ, ಉಮಾಭಾರತಿಯಂಥವರನ್ನ ಮನೆಗೆ ಕಳಿಸಿದ್ರು, ಪೆಟ್ರೋಲ್, ಡೀಸಲ್ ಬೆಲೆ ಗಗನಕ್ಕೆ ಹಾರಿದೆ, ಜನಾಶೀರ್ವಾದ ಯಾತ್ರೆ ಬದಲು ಕ್ಷಮಾ ಯಾತ್ರೆ ಮಾಡಿ ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಾಗ್ದಾಳಿ ನಡೆಸಿದರು.
ಸಲೀಂ ಅಹ್ಮದ್ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ವಿಫಲಗೊಂಡಿವೆ ಎಂದು ಸಹ ಸರ್ಕಾರದ ವಿರುದ್ಧ ಹರಿಹಾಯ್ದರು. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಘೋಷಿಸಿದ್ದ ೨೦ ಲಕ್ಷ ಕೋಟಿ, ಫಿಎಫ್ ಕೇರ್ (PF CARE FUND)ಹಣ ಎಲ್ಲಿಗೆ ಖರ್ಚಾಗಿದೆ, ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಕಾಲ ವ್ಯರ್ಥ ಮಾಡಿದ್ದಾರೆ, ಕೋವಿಡ್ ಸಾವಿನ ಲೆಕ್ಕ ಸುಳ್ಳು ಕೊಟ್ಟಿದ್ದಾರೆ ಎಂದು ಕಿಡಿ ಕಾರಿದರು.

























Discussion about this post