- ಹೊಲ್ ಸೇಲ್ ಟೊಮೊಟೊ ಬೆಲೆ ಪಾತಾಳಕ್ಕೆ
- ಪ್ರಮುಖ ರಾಜ್ಯಗಳಲ್ಲಿ ಬೆಲೆ ಇಳಿಕೆ
- ಟೊಮೊಟೊ ಬೆಳೆದವರಿಗೆ ಗ್ರೇಟ್ ಲಾಸ್
ಬೆಂಗಳೂರು: ಬಹುತೇಕ ಟೊಮೊಟೊ ರಾಜ್ಯಗಳಲ್ಲಿ ಟೊಮೊಟೊ ಸಗಟು ವ್ಯಾಪಾರದ ಬೆಲೆ ಪಾತಾಳಕ್ಕೆ ಕುಸಿದಿದೆ. ಕೆ.ಜಿ ಟೊಮೊಟೊಗೆ ಬರಿ ನಾಲ್ಕು ರೂಪಾಯಿ ಇದೆ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ, ಸರ್ಕಾರ ಇರಿಸಿರುವ 31 ಕೇಂದ್ರಗಳ ಪೈಕಿ ಟೊಮೊಟೊ ಬೆಳೆಯುವ 23 ಕೇಂದ್ರಗಳಲ್ಲಿ ಕಳೆದ ವರ್ಷದ ಬೆಲೆಗಿಂತ ಶೇ. ೫೦ರಷ್ಟು ಬೆಲೆ ಕುಸಿದಿದೆ.
೨೦೨೧-೨೨ರ ಬೆಳೆ ವರ್ಷದ (ಜೂನ್-ಜುಲೈ) ನ ಬೇಸಿಗೆ ಬೆಳೆ ಕೊಯ್ಲು ನಡೆಯುತ್ತಿದೆ. ಕಳೆದ ವರ್ಷ ಆಗಸ್ಟ್ ನಲ್ಲಿದ್ದ ಬೆಲೆಯೂ ಈಗ ಇಲ್ಲ. ಕಳೆದ ವರ್ಷಕ್ಕಿಂತ ಅರ್ಧ ಬೆಲೆಯೂ ಸಹ ನಡೆಯುತ್ತಿಲ್ಲ. ಮಧ್ಯಪ್ರದೇಶದ ದೇವಾಸ್ ಎಂಬ ಪ್ರದೇಶದಲ್ಲಿ ಟೊಮೊಟೊ ಸಗಟು ಬೆಲೆ ಕೆ.ಜಿಗೆ ರೂ.೧೧ಕ್ಕೆ ಮಾರಾಟವಾಗುತ್ತಿತ್ತು. ಇಲ್ಲಿ ೨೮ಕ್ಕೆ ರೂ. ೮ಕ್ಕೆ ಕುಸಿದಿದೆ.
ಅದೇ ರೀತಿ ಮಹಾರಾಷ್ಟ್ರದ ಜಲಗಾಂವ್ ಪ್ರದೇಶದಲ್ಲಿ ಟೊಮೊಟೊ ಸಗಟು ಬೆಲೆ ಕೆ.ಜಿಗೆ ೨೧ ರೂ. ಇದ್ದದ್ದು, ಈಗ ಮತ್ತೆ ರೂ. ೪ಕ್ಕೆ ಇಳಿದಿದೆ. ಇದು ಸಹ ಹೆಚ್ಚು ಟೊಮೊಟೊ ಬೆಳೆಯುವ ಸ್ಥಳವಾಗಿದೆ. ಈ ದರವು ಆಗಸ್ಟ್ ೨೮ರಂತೆ ಇದೆ. ಔರಂಗಾಬಾದ್ ಟೊಮೊಟೊ ಬೆಲೆ ಪ್ರತಿ ಕೆ.ಜಿಗೆ ರೂ.೪.೫೦ಕ್ಕೆ ಇಳಿಕೆಯಾಗಿದ್ದು, ವರ್ಷದ ಹಿಂದೆ ಪ್ರತಿ ಕೆಜಿಗೆ ರೂ. ೯.೫೦ ಇತ್ತು. ಸೊಲ್ಲಾಪುರದಲ್ಲಿ ಬೆಲೆ ಕೆ.ಜಿಗೆ ೧೫ ರೂ. ನಿಂದ ೫ ರೂಗೆ ಇಳಿದಿದೆ.
ಕೊಲ್ಲಾಪುರದಲ್ಲಿ ಪ್ರತಿ ಕೆ.ಜಿಗೆ ವರ್ಷದ ಹಿಂದೆ ಇದ್ದ ೨೫ ರೂ. ನಿಂದ ರೂ. ೬.೫೦ಕ್ಕೆ ಇಳಿದಿದೆ. ರಾಷ್ಟ್ರೀಯ ತೋಟಗಾರಿಕ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನ (NHRDF) ಹಂಗಾಮಿ ನಿರ್ದೇಶಕ ನಿರ್ದೇಶಕ ಪಿಕೆ ಗುಪ್ತಾ ಪಿಟಿಐ ಸುದ್ದಿ ಸಂಸ್ಥೆಗೆ ಹೀಗೆ ಹೇಳಿದ್ದಾರೆ- ’ಪೂರೈಕೆ ಕೊರತೆಯಿಂದಾಗಿ ಟೊಮೊಟೊ ಬೆಳೆಯುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಬೆಲೆಯ ಒತ್ತಡಕ್ಕೆ ಸಿಲುಕಿದೆ.
ಅನುಕೂಲಕರ ವಾತಾವರಣದಿಂದಾಗಿ ಟೊಮೊಟೊ ಬೆಳೆ ಉತ್ತಮವಾಗಿದೆ’ ಆಹಾರ ಸಂಸ್ಕರಣಾ ಕಂಪನಿಗಳು ಟೊಮೊಟೊ ರೈತರ ರಕ್ಷಣೆಗೆ ಬಂದರೆ ಬೆಲೆ ಇಳಿಕೆಯಿಂದ ರೈತರನ್ನು ಕಾಪಾಡಬಹುದು ಎಂದು ಅವರು ಹೇಳಿದ್ದಾರೆ. ಕರ್ನಾಟಕದ ಕೋಲಾರದಲ್ಲಿ ಕೆಜಿಗೆ ೫.೩೦ ರೂ. ಬೆಲೆಗೆ ಇಳಿದಿದೆ. ಹಿಂದಿನ ವರ್ಷ ಪ್ರತಿ ಕೆ.ಜಿಗೆ ೧೮.೭೦ ರೂ ಇತ್ತು.
ಚಿಕ್ಕಬಳ್ಳಾಪುರದಲ್ಲಿ ಕೆಜಿಗೆ ಕಳೆದ ವರ್ಷ ೧೮.೫೦ ರೂ. ಇತ್ತು, ಇದೀಗ ೭.೩೦ ರೂ.ಗೆ ಇಳಿದಿದೆ. ಆಂಧ್ರ, ಪಲಮನೇರ್, ಚಿತ್ತೂರು, ಮುಲಕಲಚೆರುವಿನಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಇದೆ.

























Discussion about this post