ಬೆಳಗಾವಿ: ತೀವ್ರ ಕುತೂಹಲ ಮೂಡಿಸಿದ್ದ ಪಾಲಿಕೆ ಚುನಾವಣೆ ಫಲಿತಾಂಶ ಹೊರಬಂದಿದ್ದು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇದೇ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಬಿಜೆಪಿ ಒಟ್ಟು ೩೦ ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಕೈ ೭, ಪಕ್ಷೇತರ ೫, ಎಂಇಎಸ್೨, ಎಂಐಎಂ ೧ ಸ್ಥಾನದಲ್ಲಿ ಗೆದ್ದಿವೆ.
ವಾರ್ಡ್ ೫೭ರಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಸೋಮನಾಚೆ, ವಾರ್ಡ್ ೮ ರಲ್ಲಿ ಬಿಜೆಪಿ ಅಭ್ಯರ್ಥಿ ಜ್ಯೋತಿ ಬಾ ನಾಯಿಕ್, ವಾರ್ಡ್ ೪೨ ರಲ್ಲಿ ಬಿಜೆಪಿ ಅಭ್ಯರ್ಥಿ ಅಭಿಜಿತ್ ಜವಳೇಕರ್, ವಾರ್ಡ್ ೪೯ರಲ್ಲಿ ಬಿಜೆಪಿ ಅಭ್ಯರ್ಥಿ ದೀಪಾಲಿ ಟೋಪಗಿ, ವಾರ್ಡ್ ೨೪ರಲ್ಲಿ ಬಿಜೆಪಿ ಅಭ್ಯರ್ಥಿ ಗಿರೀಶ್ ದೊಂಗಡಿ, ವಾರ್ಡ್ ೩೨ರಲ್ಲಿ ಬಿಜೆಪಿ ಸಂದೀಪ್ ಗೆಲುವು ಪಡೆದಿದ್ದಾರೆ.ಇತ್ತ ನಾಡದ್ರೋಹಿ ಎಂಇಎಸ್ ಇದರಿಂದ ಮುಖಭಂಗವಾಗಿದೆ.
ವಾರ್ಡ್ ೫೭ರಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಸೋಮನಾಚೆ, ವಾರ್ಡ್ ೮ರಲ್ಲಿ ಬಿಜೆಪಿ ಅಭ್ಯರ್ಥಿ ಜ್ಯೋತಿಬಾ ನಾಯಿಕ್, ವಾರ್ಡ್ ೪೨ರಲ್ಲಿ ಬಿಜೆಪಿ ಅಭ್ಯರ್ಥಿ ಅಭಿಜಿತ್ ಜವಳೇಕರ್, ವಾರ್ಡ್ ೪೯ರಲ್ಲಿ ಬಿಜೆಪಿ ಅಭ್ಯರ್ಥಿ ದೀಪಾಲಿ ಟೋಪಗಿ, ವಾರ್ಡ್ ೨೪ರಲ್ಲಿ ಬಿಜೆಪಿ ಅಭ್ಯರ್ಥಿ ಗಿರೀಶ್ ದೊಂಗಡಿ, ವಾರ್ಡ್ ೩೨ರಲ್ಲಿ ಬಿಜೆಪಿ ಅಭ್ಯರ್ಥಿ ಸಂದೀಪ್ ಗೆದ್ದು ಬಂದಿದ್ದಾರೆ.
ಹುಬ್ಬಳ್ಳಿ-ಧಾರವಾಡ: ಬಿಜೆಪಿ ಅಭ್ಯರ್ಥಿಗಳು ಹುಬ್ಬಳ್ಳಿ-ಧಾರವಾಡದಲ್ಲಿ ೩೫ ವಾರ್ಡ್ ನಲ್ಲಿ ಮೇಲುಗೈ ಸಾಧಿಸಿ ಗೆದ್ದಿದ್ದಾರೆ. ಕಾಂಗ್ರೆಸ್ ೨೧ ಅಭ್ಯರ್ಥಿಗಳು ಪಕ್ಷೇತರರಾದ ೫ ಮಂದಿ ಸಹ ಗೆಲುವು ಸಾಧಿಸಿದ್ದಾರೆ.
ಕೈ ಅಭ್ಯರ್ಥಿ ಮೊಹಮ್ಮದ್ ಅಳ್ಳೂರು ಸೋತಿದ್ದು, ಎಐಎಂಐಎಂ ಅಭ್ಯರ್ಥಿ ನಜೀರ್ ೨೮೦೦ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಲಬುರಗಿಯಲ್ಲಿ ಕಾಂಗ್ರೆಸ್ ಆರು ವಾರ್ಡ್ ಗಳಲ್ಲಿ ಗೆಲುವು ಪಡೆದಿದೆ. ಉಳಿದಂತೆ, ವಾರ್ಡ್ ನಂಬರ್ ೬, ೯, ೫೧ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಪಕ್ಷೇತರ ಒಂದು, ಜೆಡಿಎಸ್ ಒಂದು ವಾರ್ಡ್ ನಲ್ಲಿ ಗೆಲುವು ಸಾಧಿಸಿದೆ.

























Discussion about this post