ಬೆಂಗಳೂರು: ಕಾಂಗ್ರೆಸ್ ಮೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಒಟ್ಟು 269 ಸ್ಥಾನಗಳ ಪೈಕಿ ಬಿಜೆಪಿ ಪಡೆದಿರುವುದು 114 ಸ್ಥಾನ ಮಾತ್ರ, ಕಾಂಗ್ರೆಸ್ 100 ಸ್ಥಾನದಲ್ಲಿ ಗೆದ್ದಿದೆ ಎಂದು ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಬಿಜೆಪಿಯ ಹಣ, ಅಧಿಕಾರ ದುರ್ಬಳಕೆಯಿಂದ 114 ಸ್ಥಾನ ಪಡೆದಿದ್ದು, ಪ್ರಚಾರ ನಡೆಸಲು ಅವಕಾಶ ಕೊಡದಿದ್ದರೂ ಹೋರಾಟ ಮಾಡಿದ ಕಾಂಗ್ರೆಸ್ 100 ಸ್ಥಾನದಲ್ಲಿ ಗೆದ್ದಿದೆ. ನಮಗೂ ಹಾಗೂ ಬಿಜೆಪಿಗೂ ಇರುವ ಅಂತರ ಕೇವಲ 14 ಸ್ಥಾನ ಅಷ್ಟೇ ಎಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಏಪ್ರಿಲ್ ನಲ್ಲಿ ನಡೆದ ಸ್ಥಳೀಯಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು. ಸರ್ಕಾರ ಏನೆಲ್ಲ ಪ್ರಯತ್ನ ಮಾಡಿದರೂ ಅವರ ನಿರೀಕ್ಷೆಗೆ ತಕ್ಕಂತೆ ಜನರ ಬೆಂಬಲ ಸಿಕ್ಕಿಲ್ಲ ಎಂಬುದು ಈಗ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.
ಸಿ.ಟಿ ರವಿ, ನಳೀನ್ ಕುಮಾರ್ ಕಟೀಲ್, ಸೇರಿದಂತೆ ಬಿಜೆಪಿ ನಾಯಕರು ಬೆಲೆ ಏರಿಕೆ ವಿಚಾರವಾಗಿ ಜನರನ್ನು ದಾರಿ ತಪ್ಪಿಸುವ ಸಂಚು ಆಗಿದೆಎಂದು ಟೀಕಾ ಪ್ರಹಾರ ನಡೆಸಿದರು ಅವರು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಗೆ ಕಾಂಗ್ರೆಸ್ ನೀಡಿದ ತೈಲ ಬಾಂಡ್ ಗಳೇ ಕಾರಣ ಎಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಬಹಿರಂಗ ಚರ್ಚೆ ಮಾಡಲು ಸಿದ್ಧವಿದ್ದೇವೆ ಎಂದು ಸವಾಲು ಹಾಕುತ್ತೇನೆ ಎಂದು ತಿಳಿಸಿದರು

























Discussion about this post