ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ದರಬಾರು. ನಾಲ್ಕೇ ಸೀಟೇ ಪಡೆದರೂ ಬಿಜೆಪಿ ಆಗಲಿ ಅಥವಾ ಕಾಂಗ್ರೆಸ್ ಆಗಲಿ ಅಧಿಕಾರ ನಡೆಸಲು ಸಾಧ್ಯವಿಲ್ಲ. ಸಿಎಂ ಬೊಮ್ಮಾಯಿಯವರನ್ನೇ ಮುನ್ನೆಲೆಯಲ್ಲಿರಿಸಿ ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹವಣಿಸುತ್ತಿದೆ. ಜೆಡಿಎಸ್ ಜೊತೆಗೆ ಸಿಎಂ ಉತ್ತಮ ಸಂಬಂಧ ಹೊಂದಿದ್ದು, ಬಿಜೆಪಿ ಈಗ ಲಾಭದ ನಿರೀಕ್ಷೆಯಲ್ಲಿದೆ ಎಂದು ಊಹಿಸಲಾಗಿದೆ.
ಬಿಜೆಪಿಯು ತನ್ನ ತೆಕ್ಕೆಗೆ ಜೆಡಿಎಸ್ ಅನ್ನು ತೆಗೆದುಕೊಳ್ಳಲಿದ್ದು, ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಜೊತೆಗೆ ಮಾತುಕತೆ ನಡೆಸುವುದು ಬಹುತೇಕ ಖಚಿತವಾದಂತಿದೆ. ಈ ಮಾತುಕತೆ ಫಲಪ್ರಧವಾಗುವ ತನಕ ಬಿಜೆಪಿ ಮೈತ್ರಿ ವಿಚಾರಕ್ಕೆ ಪೂರಕವಾದ ನಂತರ ಮೇಯರ್ ಚುನಾವಣೆಗೆ ಸುತ್ತೋಲೆ ಹೊರಡಿಸುವುದು ಎನ್ನಲಾಗಿದೆ. ಕಾಂಗ್ರೆಸ್ ಅಲ್ಲಿಯವರೆಗೆ ತೆಪ್ಪಗಿರುವುದು ಸಾಧ್ಯವಿಲ್ಲ ಎಂಬುದರ ಅರಿವು ಬಿಜೆಪಿಗೆ ಇದ್ದೇ ಇದೆ.
ಹೀಗಾಗಿ ಕಲಬುರಗಿ ಮಹಾಪಾಲಿಕೆಯ ಅಖಾಡದಲ್ಲಿ ಮೂರು ಪಕ್ಷಗಳ ಕಸರತ್ತುಗಳು ನಡೆದೇ ಇವೆ. ಕಾಂಗ್ರೆಸ್ ಏನಾದರೂ ತಂತ್ರಗಾರಿಕೆ ಹೂಡುವ ನಿರೀಕ್ಷೆಯೂ ಇದೆ, ಜೊತೆಗೆ ಜೆಡಿಎಸ್, ಕಾಂಗ್ರೆಸ್ ನಾಯಕರಿಗೂ ಅಪರೇಷನ್ ಕಮಲದ ಭೀತಿ ಸಹ ಕಾಡುತ್ತಲೇ ಇದೆ.

























Discussion about this post