ಬೆಂಗಳೂರು: ವಿಧಾನ ಮಂಡಲ ಅಧಿವೇಶದ ಸಿಎಂ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಇಂದು ಪ್ರಾರಂಭವಾಗಿದ್ದು, ಚೊಚ್ಚಲ ಅಧಿವೇಶನದಲ್ಲಿ ಕಾಂಗ್ರೆಸ್ ತನ್ನ ಭತ್ತಳಿಕೆಯಲ್ಲಿ ಹಲವು ಬಾಣಗಳನ್ನು ಪೇರಿಸಿಟ್ಟುಕೊಂಡಿದೆ.
ಬೆಲೆ ಏರಿಕೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಭ್ರಷ್ಟಾಚಾರ ಪ್ರಕರಣಗಳು ಕಾಂಗ್ರೆಸ್ ಮುನ್ನೆಲೆಗೆ ತರುವ ನಿರೀಕ್ಷೆ ಇದ್ದೇ ಇದೆ. ಜೆಡಿಎಸ್ ಪಡೆಯೂ ಇದರಲ್ಲಿ ಹಿಂದೆ ಸರಿದಿಲ್ಲ. ಜೆಡಿಎಸ್ ಸಹ ಅಕ್ರಮ ಗಣಿಗಾರಿಕೆ, ಸಕ್ರಮ ಗಣಿಗಾರಿಕೆ ಸೇರಿದಂತೆ, ಸ್ಥಳೀಯ ಮಂಡ್ಯದ ವಿಚಾರಗಳನ್ನು ಭಿರುಸಿನಿಂದ ಚರ್ಚಿಸಲಿದೆ.
ಕಾಂಗೈ ಪಡೆ ಈಗಾಗಲೇ ಎತ್ತಿನಗಾಡಿಯಲ್ಲಿ ಆಗಮಿಸಿ ರಾಜ್ಯದ ಗಮನ ಸೆಳೆದಿದ್ದು, ಹತ್ತು ದಿನ ಸದರಿ ರಾಜ್ಯಸರ್ಕಾರದ ಹೆಜ್ಜೆಗಳನ್ನು ಯಾವ ರೀತಿ ಪ್ರಶ್ನಿಸುವುದು ಎಂಬ ಕಾತರ ಏರ್ಪಟ್ಟಿದೆ. ಅಧಿವೇಶನದಲ್ಲಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ, ಪೆಟ್ರೋಲ್, ಡಿಸೆಲ್, ಎಲ್‌ಪಿಜಿ ಹಾಗೂ ಅಡುಗೆ ಎಣ್ಣೆ ಬೆಲೆ ಏರಿಕೆ ಬಿಸಿ ಸದನದಲ್ಲೂ ಪ್ರಸ್ತಾಪವಾಗಲಿದೆ.
ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಬೆಲೆ ಏರಿಕೆ ಖಂಡಿಸಿ ಎತ್ತಿನ ಬಂಡಿಯಲ್ಲೇ ವಿಧಾನಸೌಧಕ್ಕೆ ಬರಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿರ್ಧರಿಸಿದ್ದರು ಎನ್ನಲಾಗಿದೆ.
ಆ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಮುಜುಗರಕ್ಕೆ ಸಿಲುಕಿಸಲು ಕಾಂಗ್ರೆಸ್ ತೀರ್ಮಾನ ಕೈಗೊಂಡು ಸಿದ್ದು ಅವರನ್ನು ಮುಂದೆ ನಿಲ್ಲಿಸಿಕೊಂಡಿದೆ ಎಂದು ಊಹಾಪೋಹಗಳೂ ಇಲ್ಲದಿಲ್ಲ.

























Discussion about this post