ಶಿವಮೊಗ್ಗ: ಮೀನು ಹಿಡಿಯಲು ಹೋದ ಬೆಸ್ತರಿಗೆ ನವಜಾತ ಶಿಶುವೊಂದು ದೊರೆತ ಘಟನೆ ತೀರ್ಥಹಳ್ಳಿಯ ಮಂಡಗದ್ದೆಯಲ್ಲಿ ನಡೆದಿದೆ.
ಮಗುವೊಂದು ದೊರೆತಿದೆ ಎಂದು ಮಂಡಗದ್ದೆಯ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಸ್ಥಳಕ್ಕೆ ತೆರಳಿದಾಗ ಮೃತ ಹೊಂದಿದ ಸ್ಥಿತಿಯಲ್ಲಿ ಮಗು ಪತ್ತೆಯಾಗಿದೆ
ಆ ಪುಟ್ಟ ಮೃತ ಶರೀರವನ್ನು ಶವಾಗಾರದಲ್ಲಿರಿಸಿ, ಮರಣೋತ್ತರ ಪರೀಕ್ಷೆ ನಡೆಸಿ ನಂತರದಲ್ಲಿ ಮಗುವಿನ ಅಂತ್ಯಸಂಸ್ಕಾರವನ್ನು ಪೊಲೀಸ್ ಇಲಾಖೆಯ ಸಿಬ್ಬಂದಿಗಳೇ ನಡೆಸಿ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಹಂತದ ತನಿಖೆಯನ್ನು ನಡೆಸುತ್ತಿದ್ದಾರೆ.

























Discussion about this post