ಬೆಂಗಳೂರು: ನಗರದ ಬೇಗೂರಿನ ದೇವರಚಿಕ್ಕನ ಹಳ್ಳಿಯ IIM ಬಳಿ ಇಂದು ಮಧ್ಯಾಹ್ನ ೩ ಗಂಟೆ ಸುಮಾರಿಗೆ ಬೆಂಕಿಅಪಘಾತದಿಂದಾಗಿ ಇಬ್ಬರು ಸಾವಿಗೀಡಾದ ಘಟನೆ ನಡೆದಿದೆ.
ಆಶ್ರೀತ್ ಆಸ್ಪೈರ್ ಅಪಾರ್ಟ್‌ಮೆಂಟ್ ನಲ್ಲಿ ಗ್ಯಾಸ್ ಪೈಪ್ ಲೈನ್ ನಲ್ಲಿ ಆದ ಗ್ಯಾಸ್ ಲೀಕೇಜ್ ನಿಂದ ಸದರಿ ಅವಘಡದ ಘಟನೆ ಸಂಭವಿಸಿದೆ.
ಮೃತರನ್ನು ತಾಯಿ-ಮಗಳು ಎಂದು ಗುರುತಿಸಲಾಗಿದ್ದು, ಅವರು ನಿನ್ನೆಯಷ್ಟೇ ಅಮೇರಿಕಾದಿಂದ ಆಗಮಿಸಿದ್ದರು ಎನ್ನಲಾಗಿದೆ.
ಭೀಮಸೇನ್ ಎಂಬುವವರಿಗೆ ತೀವ್ರ ಗಾಯಗಳಾಗಿವೆ. ತಾಯಿ ಲಕ್ಷ್ಮೀ ದೇವಿ(೮೨), ಪುತ್ರಿ ಭಾಗ್ಯ ರೇಖಾ (೫೯) ಮೃತ ದುರ್ದೈವಿಗಳು. ೨೧೦ ಫ್ಲ್ಯಾಟ್ ನಲ್ಲಿದ್ದ ಇವರಿಬ್ಬರು ಸಜೀವ ದಹನವಾಗಿದ್ದಾರೆ. ಇವರಿಬ್ಬರ ಮೃತದೇಹಗಳು ಅಗ್ನಿಶಾಮಕ ದಳಕ್ಕೆ ಲಭ್ಯವಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಸಿಲಿಂಡರ್ ಸ್ಪೋಟದ ಶಂಕೆ ಎನ್ನಲಾಗುತ್ತಿದ್ದರೂ ತನಿಖೆ ನಂತರವಷ್ಟೇ ವಾಸ್ತವ ಸತ್ಯಗಳು ಹೊರಬೀಳಲಿವೆ. ಇದಕ್ಕಾಗಿ ಏರಿಯಲ್ ಲ್ಯಾಡರ್ ಪ್ಲಾಟ್ ಫಾರಂ ಮಷೀನ್ ತರಲಾಗಿದ್ದು, ಇದನ್ನು ಅತ್ಯಂತ ಕ್ಲಿಷ್ಟ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ ಎಂದು ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.
ಅಗ್ನಿಶಾಮಕ ದಳದ ೫ ವಾಹನಗಳಿಂದ ಕಾರ್ಯಾಚರಣೆ ನಡೆಸಲಾಗಿದೆ.
ಘಟನೆಗೆ ಖಚಿತವಾದ ಕಾರಣಗಳಿನ್ನು ಅಲಭ್ಯ. ಮನೆ ಸಂಪೂರ್ಣ ಸುಟ್ಟು ಹೋದ ಬಗ್ಗೆ ಮಾಹಿತಿ ಸಿಕ್ಕಿದೆ. ಅಕ್ಕಪಕ್ಕದವರ ಪ್ರಕಾರ ಸಿಲಿಂಡರ್ ಸ್ಫೋಟವಲ್ಲ, ಭಾರಿ ಸ್ಫೋಟದ ಸದ್ದು ಕೇಳಿಬಂದಿತ್ತು ಎಂದು ಹೇಳಲಾಗುತ್ತಿದೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್ ನಿಂದಲೂ ಬೆಂಕಿ ಹೊತ್ತಿರಬಹುದು ಎಂಬ ಅನುಮಾನವೂ ಇದೆ.
ಘಟನೆಯ ಬಗ್ಗೆ ಅಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಷಿಯಿಂದ ಬೊಮ್ಮನಹಳ್ಳಿ ಶಾಸಕ ಸತೀಷ್ ರೆಡ್ಡಿ ಮಾಹಿತಿ ಪಡೆಯುತ್ತಿದ್ದಾರೆ. ಘಟನೆಗೆ ಖಚಿತ ಕಾರಣ ತಿಳಿದುಬಂದಿಲ್ಲ ಎಂದು ಸತೀಷ್ ರೆಡ್ಡಿ ತಿಳಿಸಿದ್ದಾರೆ.
ಘಟನೆಗೆ ನಿಖರ ಕಾರಣ ಪತ್ತೆಯಾಗಿಲ್ಲ
ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಶಿಯಿಂದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾಹಿತಿ ಪಡೆಯುತ್ತಿದ್ದಾರೆ. ಮನೆ ಸಂಪೂರ್ಣ ಸುಟ್ಟ ಕರಕಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಕ್ಕಪಕ್ಕದವರ ಮಾಹಿತಿ ಪ್ರಕಾರ ಘಟನೆ ಸಿಲಿಂಡರ್ ಸ್ಫೋಟವಲ್ಲ. ಯಾವುದೇ ಸ್ಫೋಟದ ಸದ್ದು ಕೇಳಿ ಬಂದಿಲ್ಲ ಎಂಬ ಮಾಹಿತಿ ದೊರಕಿದೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್ನಿಂದ ಅನಾಹುತ ಸಂಭವಿಸಿರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಘಟನೆಗೆ ಇನ್ನೂ ನಿಖರವಾದ ಕಾರಣ ಪತ್ತೆಯಾಗಿಲ್ಲ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.
ರೆಸ್ಕ್ಯೂ ಆಪರೇಷನ್ ನಡೆಯುತ್ತಲೇ ಇದ್ದು, ಇಳಿ ಮಧ್ಯಾಹ್ನದಿಂದಲೂ ಹೋರಾಟದಂತೆ ಸಾಗಿದೆ.
ಹೊಗೆ ದಟ್ಟವಾಗಿ ಆವರಿಸಿರುವುದರಿಂದ ಕಾರ್ಯಾಚರಣೆ ಸ್ವಲ್ಪ ತಡವಾಗಿದ್ದು ಬೆಂಕಿ ನಂದಿಸಲು, ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಘಟನಾ ಸ್ಥಳದಲ್ಲಿ ಎಡಿಜಿಪಿ ಅಮರ್‌ಕುಮಾರ್ ಪಾಂಡೆ ತಿಳಿಸಿದ್ದಾರೆ.
ಸದರಿ ಅಗ್ನಿ ಅವಘಡ ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಹಿರಿಯ ಅಧಿಕಾರಿ ರಾಮಕೃಷ್ಣ, ಎಡಿಜಿಪಿ ಅಮರ್ ಕುಮಾರ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮತ್ತು ವಿಧಾನಸಭೆ ಸರ್ಕಾರಿ ಮುಖ್ಯ ಸಚೇತಕ ಸತೀಶ್ ರೆಡ್ಡಿ ಸ್ಪೀಕರ್ ಅನುಮತಿ ಪಡೆದು ವಿಧಾನಸಭೆಯಿಂದ ನಿರ್ಗಮಿಸಿದ್ದರು.
ಅಪಾರ್ಟ್ಮೆಂಟ್ನಲ್ಲಿ ಅಗ್ನಿ ಅವಘಡ ಸಂಭವಿಸಿರುವುದರಿಂದ ಸಮೀಪದ ಅಪಾರ್ಟ್ಮೆಂಟ್ನಲ್ಲಿ . 60ಕ್ಕೂ ಅಲ್ಲಿನ ಹೆಚ್ಚು ನಿವಾಸಿಗಳಿಗೆ ಕ್ಲಬ್‌ಹೌಸ್‌ನಲ್ಲಿ ಆಶ್ರಯ ವ್ಯವಸ್ಥೆ ಮಾಡಲಾಗಿದೆ.

























Discussion about this post