ಬೆಂಗಳೂರು: ಚಾಮರಾಜಪೇಟೆಯ ನ್ಯೂ ತರಗು ಪೇಟೆಯಲ್ಲಿ ಸ್ಫೋಟಗೊಂಡಿದ್ದು, ಪಟಾಕಿ ಗೋದಾಮಿನಲ್ಲಿ ಈ ದುರ್ಘಟನೆ ನಡೆದಿದೆ.
ಇಲ್ಲಿ ಯಾರು ಪಟಾಕಿಯನ್ನ ಸಂಗ್ರಹಿಸಿದರು, ಎಷ್ಟು ಸಮಯ ಪಟಾಕಿ ಸಂಗ್ರಹ ಮಾಡಿದ್ದರು ಈ ಮಾಹಿತಿ ಇನ್ನು ತಿಳಿದು ಬಂದಿಲ್ಲ.
ಚಾಮರಾಜಪೇಟೆಯ ರಾಯನ್ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕ್ಷಿಪ್ರಗತಿಯಲ್ಲಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಮೂವರು ಕಾರ್ಮಿಕರ ದೇಹ ಛಿದ್ರ ಛಿದ್ರವಾಗಿದೆ, ನಾಲ್ಕು ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿ ಹೇಳಿದರು.
ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಬೈಕ್ ಸುಟ್ಟು ಕರಕಲು ಆಗಿದೆ. ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇಬ್ಬರು ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿದೆ.
ಮದ್ಯಾಹ್ನ ೧೨: ೦೫ರ ವೇಳೆಗೆ ಶಬ್ದ ಕೇಳಿಬಂದಿದ್ದು, ಬಾಂಬ್ ಇರಬೇಕು ಎಂದು ಜನ ಹೊರಗೆ ಓಡಿ ಬಂದಿದ್ದರು.
ಪಂಕ್ಚರ್ ಅಂಗಡಿಯ ಕಂಪ್ರೈಸರ್ ಸ್ಪೋಟ ಶಂಕೆಯೂ ವ್ಯಕ್ತವಾಗಿದೆ. ಅಕ್ಕಪಕ್ಕದ ಮನೆಯವರಿಗೂ ಗಾಯಗಳಾಗಿವೆ.
ಪಟಾಕಿ ಗೋದಾಮಿನ ಮಾಲಿಕ ಅರೆಸ್ಟ್ ಮಾಡಲಾಗಿದೆ

























Discussion about this post