ಬೆಂಗಳೂರು: ಈ ಬಾರಿಯ ದಸರಾ ಹಬ್ಬದ ಬಳಿಕ 1 ರಿಂದ 5ನೇ ತರಗತಿ ಆರಂಭಕ್ಕೆ ಚಿಂತನೆ ನಡೆಸಲಾಗಿದೆ. ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, 1 ರಿಂದ 5ನೇ ತರಗತಿ ಆರಂಭ ಸಂಬಂಧ ಈ ವಾರದಲ್ಲಿ ಸಿಎಂ ಜೊತೆಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.
ಇದರ ಜೊತೆಗೆ ಕೊವಿಡ್ ತಾಂತ್ರಿಕಾ ಸಲಹಾ ಸಮಿತಿ ಚರ್ಚೆ ನಡೆಸಲಾಗುವುದು, ಸದರಿ ಸಭೆಯಲ್ಲಿ ಒಂದರಿಂದ ಐದರವರೆಗೆ ಶಾಲೆಗಳ ಆರಂಭಕ್ಕೆ ಮನವಿ ಮಾಡುತ್ತೇವೆ ಎಂದು ಅವರು ತಿಳಿಸಿದರು. ಇದೇ ವೇಳೆ ಮಾತನಾಡಿದ ಅವರು, ಸದ್ಯ ವೈರಲ್ ಇನ್ಫೆಕ್ಷನ್ ಡೆಂಘೀ ಜ್ವರದ ಕಾಟ ಇದೆ. ಹೀಗಾಗಿ 1, 2ನೇ ತರಗತಿ ಆರಂಭಿಸಲು ಅನುಮತಿ ನೀಡದಿದ್ದರೂ 3,4,5 ನೇ ತರಗತಿ ಆರಂಭಿಸಲಾದರೂ ಅನುಮತಿ ನೀಡುವಂತೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದರು.
ಐದನೇ ತರಗತಿವರೆಗೂ ಶಾಲೆ ಓಪನ್ ಮಾಡುವ ಬಗ್ಗೆ ನಾನು ಮತ್ತು ಸಿಎಂ ಉತ್ಸಾಹದಲ್ಲಿ ಇದ್ದೇವೆ. ಆದರೆ, ತಜ್ಞರ ಜತೆ ಚರ್ಚೆ ಮಾಡಿದ ಬಳಿಕ ಈ ಬಗ್ಗೆ ನಿರ್ಧಾರ ಮಾಡುತ್ತೇವೆ. ಶಾಲೆ ತೆರೆಯಲು ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಒಪ್ಪಿಗೆ ಕಡ್ಡಾಯವಾಗಿ ಬೇಕು. ಶಿಕ್ಷಣ ಎಷ್ಟು ಮುಖ್ಯವೋ ಮಕ್ಕಳ ಆರೋಗ್ಯ ಮತ್ತು ಜೀವ ಸಹ ಅಷ್ಟೇ ಮುಖ್ಯವಾಗಿದೆ. ಒಂದರಿಂದ ಐದನೇ ತರಗತಿ ಅಥವಾ ಮೂರರಿಂದ ಐದನೇ ತರಗತಿ ತೆರೆಯಬೇಕೆ? ಎಂಬುದರ ಬಗ್ಗೆ ಅಂತಿಮವಾಗಿ ತಜ್ಞರ ಸಲಹೆಯಂತೆ ನಿರ್ಧಾರ ಮಾಡುತ್ತೇವೆ ಎಂದು ಅವರು ಸ್ಪಷ್ಟೀಕರಣ ನೀಡಿದರು.
ಅಕ್ಟೋಬರ್ 1ನೇ ತಾರೀಖಿನಿಂದ 6 ರಿಂದ 12ನೇ ತರಗತಿವರೆಗೂ ಪೂರ್ಣ ಪ್ರಮಾಣದಲ್ಲಿ ಶಾಲೆ ತೆರೆಯಲಾಗುವುದು. ಶಾಲೆ ತೆರದಾಗಿನಿಂದ ಹಾಜರಾತಿ ಚೆನ್ನಾಗಿದೆ. ಶಾಲೆಗೆ ಮಕ್ಕಳನ್ನು ಕಳುಹಿಸದ ಪೋಷಕರು ಧೈರ್ಯವಾಗಿ ಶಾಲೆಗೆ ಕಳುಹಿಸಿ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಪಾಲಕರಿಗೆ ಮನವಿ ಮಾಡಿದರು.

























Discussion about this post