ಚಿಕ್ಕಮಗಳೂರು: ಆನೆ ಕಾಟದಿಂದ ಬೇಸತ್ತಿದ್ದ ಮಲೆನಾಡಿನ ಜನರಿಗೆ ಇದೀಗ ಹುಲಿ ಕಾಟ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರೆಕುಡಿಗೆ ಸಮೀಪ ಹುಲಿಯೊಂದು ಪ್ರತ್ಯಕ್ಷವಾಗಿದೆ.
ಮೂಡಿಗೆರೆಯ ಅರೆಕುಡಿಗೆ ಸಮೀಪದ ಕುಪ್ಪನಹಳ್ಳಿ ಎಸ್ಟೇಟ್ ನ ಸಮೀಪದ ತೋಟದಲ್ಲಿ ಹುಲಿ ತಿರುಗಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ಹುಲಿ ತಿರುಗಾಡುತ್ತಿದ್ದ ದೃಶ್ಯವನ್ನು ಎಸ್ಟೇಟ್ ನ ಕಾರ್ಮಿಕ ಸಂಜೀವ ಎಂಬುವವರು ತಮ್ಮ ಮೊಬೈಲ್ ಫೋನಿನಲ್ಲಿ ಸೆರೆ ಹಿಡಿದಿದ್ದಾರೆ.
ಇದರಿಂದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಮಲೆನಾಡು ಹೆಚ್ಚಾಗಿ ಕೃಷಿ ಚಟುವಟಿಕೆಗಳಿಂದ ಅವಲಂಬಿತವಾಗಿರುವ ಕಾರಣ ಸುತ್ತ ಮುತ್ತಲಿನ ಭಾಗದ ಕೃಷಿಕರು ಹಾಗೂ ತೋಟದ ಕೂಲಿ ಕಾರ್ಮಿಕರು ತಮ್ಮ ದೈನಂದಿನ ಕೃಷಿ ಚಟುವಟಿಕೆ ನಡೆಸಲು ಭಯಭೀತರಾಗಿ ಹಿಂದೇಟು ಹಾಕುತ್ತಿದ್ದಾರೆ.
ಸ್ಥಳಕ್ಕೆ ರೇಂಜರ್ ಮೋಹನ್ ಕುಮಾರ್ ನೇತೃತ್ವದಲ್ಲಿ ಮೂಡಿಗೆರೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿದ್ದಾರೆ.

























Discussion about this post