ಕನ್ನಡನಾಡಿ ಸುದ್ದಿಜಾಲ: ಚಂಡೀಗಡ ಮೂಲದ ಹರ್ನಾಸ್ ಸಂಧು ‘ಮಿಸ್ ಯೂನಿವರ್ಸ್ ಇಂಡಿಯಾ 2021’ರ ಕಿರೀಟವನ್ನು ಸೆಪ್ಟೆಂಬರ್ 30ರಂದು ನಡೆದ ಅದ್ದೂರಿ ಸಮಾರಂಭದಲ್ಲಿ ಮುಡಿಗೇರಿಸಿಕೊಂಡಿದ್ದು, ಈ ಮೂಲಕ ಇಸ್ರೇಲ್ನಲ್ಲಿ ನಡೆಯಲಿರುವ ‘ವಿಶ್ವ ಸುಂದರಿ’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ.
ಪುಣೆಯ ರಿತಿಕಾ ಖಟ್ನಾನಿ ‘ಮಿಸ್ ದೀವಾ ಸೂಪರ್ನ್ಯಾಷನಲ್ 2022’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಅವರು 13ನೇ ಮಿಸ್ ಸೂಪರ್ನ್ಯಾಷನಲ್ ಪೇಜೆಂಟ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಜೈಪುರದ ಸೋನಲ್ ಕುಕ್ರೇಜಾ ‘ಮಿಸ್ ದೀವಾ’ದ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.
ಗುರುವಾರದಂದು ಕೊರೊನಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗಿದೆ. ಬಾಲಿವುಡ್ನ ಖ್ಯಾತ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ಧರು. ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದ 20 ಸ್ಪರ್ಧಿಗಳ ವಸ್ತ್ರವನ್ನು ಖ್ಯಾತ ವಿನ್ಯಾಸಗಾರ ಅಭಿಷೇಕ್ ಶರ್ಮಾ ವಿನ್ಯಾಸ ಮಾಡಿದ್ದರು.
ಕಾರ್ಯಕ್ರಮದಲ್ಲಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾನಿ, ಗಾಯಕಿ ಕನಿಕಾ ಕಪೂರ್, ಅಶ್ವಿನಿ ಐಯ್ಯರ್ ತಿವಾರಿ, ಮಲೈಕಾ ಅರೋರಾ ಸೇರಿದಂತೆ ಹಲವರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿದೆ.

























Discussion about this post