• Home
  • About Us
  • Contact Us
  • Terms of Use
  • Privacy Policy
Wednesday, April 1, 2026
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜ್ಯ

ದಿ. ಡಿ.ಕೆ. ರವಿ ಕುರಿತ ಪುಸ್ತಕ ಬಿಡುಗಡೆ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ ಅವರ ಕೆಲಸಕ್ಕೆ ಅಭಿನಂದನೆ

Shri News Desk by Shri News Desk
Oct 3, 2021, 11:43 am IST
in ರಾಜ್ಯ
Share on FacebookShare on TwitterTelegram

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಕುರಿತು ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ಅವರು ಬರೆದಿರುವ “ನಗ್ನ ಸತ್ಯ” ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.

ರಾಮಕೃಷ್ಣ ಉಪಾಧ್ಯ ಅವರು ಡಿ.ಕೆ ರವಿ ಅವರ ಸಾವಿನ ಕುರಿತಾಗಿ ಲ್ಯಾಂಡ್, ಲಸ್ಟ್, ಅಂಡ್ ಆಡಿಯೋ ಟೇಪ್ ಎಂಬ ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕವನ್ನು ಬರೆದಿದ್ದಾರೆ. ಇದನ್ನು ಪ್ರಹ್ಲಾದ್ ರಾವ್ ಅವರು ಕನ್ನಡಕ್ಕೆ ತರ್ಜುಮೆ ಡಿ.ಕೆ ರವಿ ಅವರ ಆತ್ಮಹತ್ಯೆಗೆ ಕಾರಣಗಳೇನು ಎಂಬ ಬಗ್ಗೆ ಹಲವಾರು ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಈ ಪುಸ್ತಕದ ಮೂಲಕ ಜನರಿಗೆ ಸತ್ಯವನ್ನು ತಿಳಿಸುವ ಕೆಲಸ ಮಾಡಿದ್ದಾರೆ ಎಂದರು.

ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದ ವೇಳೆ 2015 ಮಾರ್ಚ್ 16 ರಂದು ಡಿ.ಕೆ ರವಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿತ್ತು. ಈ ವಿಚಾರವನ್ನು ವಿರೋಧ ಪಕ್ಷಗಳು ದೊಡ್ಡ ಅಸ್ತ್ರವಾಗಿ ಬಳಸಿಕೊಂಡವು ಎಂದು ಹೇಳಿದರು.

ಡಿ.ಕೆ ರವಿ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂಬ ಬಗ್ಗೆ ಎರಡು ಮಾತಿಲ್ಲ. ಇದರ ಜೊತೆಗೆ ಪ್ರಚಾರ ಪ್ರಿಯರು ಆಗಿದ್ದರು. ಮರಳು ಮತ್ತು ಭೂ ಮಾಫಿಯಾ ವಿರುದ್ಧ ಪ್ರತಿ ಬಾರಿ ಕ್ರಮಕೈಗೊಳ್ಳುವ ಮುಂಚೆ ಮೀಡಿಯಾಗಳಿಗೆ ಮೊದಲು ತಿಳಿಸಿ, ನಂತರ ಕ್ರಮ ಜರುಗಿಸುತ್ತಿದ್ದರು. ಈ ಮೂಲಕ ಬಹುಬೇಗ ಜನಪ್ರಿಯತೆ ಗಳಿಸುವ ಪ್ರಯತ್ನ ಮಾಡಿದ್ದರು. ಇದು ನನ್ನ ಅನುಭವಕ್ಕೆ ಬಂದದ್ದಷ್ಟೇ ಅಲ್ಲ ರಾಮಕೃಷ್ಣ ಉಪಾಧ್ಯ ಅವರ ಪುಸ್ತಕದಲ್ಲೂ ಉಲ್ಲೇಖಿಸಲಾಗಿದೆ. ಅವರನ್ನು ವರ್ಗಾವಣೆ ಮಾಡುವಂತೆ ನಮ್ಮ ಪಕ್ಷದ ಯಾವುದೇ ಶಾಸಕರು ನನ್ನ ಬಳಿ ಒತ್ತಡ ಹೇರಿರಲಿಲ್ಲ. ಒಮ್ಮೆ ಡಿ.ಕೆ ರವಿ ಅವರ ಮಾವ ಹನುಮಂತರಾಯಪ್ಪ ಅವರು ರಮೇಶ್ ಕುಮಾರ್ ಅವರ ಜೊತೆ ಬಂದು ತಮ್ಮ ಮಗಳು ಬೆಂಗಳೂರಿನಲ್ಲಿ ಇದ್ದಾರೆ, ಹೀಗಾಗಿ ರವಿ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಎಂದು ಮನವಿ ಮಾಡಿದ್ದರು. ನಂತರ ನಾನು ಅವರನ್ನು ಕಮರ್ಷಿಯಲ್ ಟ್ಯಾಕ್ಸ್ ಅಂಡ್ ಎನ್‌ಫೋರ್ಸ್‌ಮೆಂಟ್ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ಆಗಿ ವರ್ಗಾವಣೆ ಮಾಡಿದ್ದೆ. ಕೋಲಾರದಲ್ಲೇ ಡಿ.ಸಿ ಯಾಗಿ ಮುಂದುವರೆಯಬೇಕು ಎಂಬ ಆಸೆ ಇದ್ದುದ್ದರಿಂದ ರವಿ ಅವರಿಗೆ ಈ ವರ್ಗಾವಣೆ ಅಷ್ಟೊಂದು ಸಂತಸದಾಯಕವಾಗಿ ಇರಲಿಲ್ಲವೇನೋ ಎಂಬುದು ನನ್ನ ಭಾವನೆ ಎಂದರು.

ಕಾನೂನು ರೀತ್ಯಾ ಹಣ ಮಾಡಬೇಕೆಂಬ ಆಸೆಯಿಂದ ರಿಯಲ್ ಎಸ್ಟೇಟ್ ಆರಂಭಿಸಿದರು. ಅವರಿಗೆ ಹರಿಕೃಷ್ಣ ಮತ್ತು ಚಂದ್ರಶೇಖರ ಎಂಬ ಇಬ್ಬರು ಗೆಳೆಯರಿದ್ದರು. ಈ ಗೆಳೆಯರ ಜೊತೆಗೂಡಿ ಆರ್ ಅಂಡ್ ಎಚ್ ಎಂಬ ರಿಯಲ್ ಎಸ್ಟೇಟ್ ಕಂಪನಿ ಶುರು ಮಾಡಿದರು. ಒಂದು 500 ಕೋಟಿ ಹಣ ಸಂಪದಾನೆ ಮಾಡಿ, ನಂತರ ಐ.ಎ.ಎಸ್ ಹುದ್ದೆಗೆ ರಾಜೀನಾಮೆ ನೀಡಿ ದೊಡ್ಡ ಉದ್ಯಮಿಯಾಗಬೇಕು ಎಂದು ಅವರ ಮಹದಾಸೆಯಾಗಿತ್ತು. ಆದರೆ ಹಣ ಮಾಡುವ ಅವರ ಈ ಆಸೆ ಈಡೇರಲಿಲ್ಲ.‌ ಇದು ಅವರ ಜೀವನದ ವೈಫಲ್ಯ ಎಂದು ಬೇಸರ ವ್ಯಕ್ತಪಡಿಸಿದರು.

ರವಿ ಅವರ ಆತ್ಮಹತ್ಯೆ ವಿಷಯವನ್ನು ಮುಂದಿಟ್ಟಕೊಂಡು ಪ್ರತಿಪಕ್ಷಗಳು ರದ್ಧಾಂತ ಮಾಡಿದವು. ಮಾಧ್ಯಮಗಳು ಬೆಂಕಿಗೆ ತುಪ್ಪ ಸುರಿದವು. ಸಾಕ್ಷ್ಯಾಧಾರ ಇಲ್ಲದೆ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದವು. ತನಿಖೆ ಇಲ್ಲದೆಯೇ ಮಾಧ್ಯಮಗಳು ತೀರ್ಪು ನೀಡಿದವು ಎಂದು ಮಾಧ್ಯಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಒಂದು ವಾರ ಏನೆಲ್ಲ ನಾಟಕಗಳು ನಡೆದವು. ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಸದಾನಂದ ಗೌಡ ಈ ಎಲ್ಲರೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರನ್ನು ಭೇಟಿ ಮಾಡಿ ಸಿಬಿಐ ತನಿಖೆಗೆ ಆಗ್ರಹಿಸಿದರು. ಈ ಪ್ರಕರಣವನ್ನು ಸಿ.ಬಿ.ಐ ಗೆ ವಹಿಸಲು ನಮ್ಮ‌ ಸರ್ಕಾರ ಯಾವುದೇ ಹಿಂದೇಟು ಹಾಕಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಆರು ಪ್ರಕರಣಗಳನ್ನು ಸಿ.ಬಿ.ಐ ಗೆ ವಹಿಸಿದ್ದೆವು. ಬಿಜೆಪಿ ಸರ್ಕಾರ ಯಾವುದಾದರೂ ಒಂದು ಪ್ರಕರಣವನ್ನು ಸಿ.ಬಿ.ಐ ಗೆ ವಹಿಸಿದೆಯಾ? ಇದೇ ಬಿಜೆಪಿಯವರು ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್ ಎಂದು ಲೇವಡಿ ಮಾಡುತ್ತಿದ್ದವರು. ಅಪ್ರಮಾಣಿಕ ರಾಜಕಾರಣ ಮಾಡುವುದರಲ್ಲಿ ಅವರು ನಿಸ್ಸೀಮರು ಎಂದು ರಾಜಕೀಯ ಬದಲಾವಣೆಗಳನ್ನು ನೆನಪಿಗೆ ತಂದುಕೊಂಡರು.

ಜೆಡಿಎಸ್ ನವರು ಡಿ.ಕೆ. ರವಿ ಅವರ ತಂದೆ, ತಾಯಿಯನ್ನು ಕರೆತಂದು ವಿಧಾನಸೌಧದ ಮುಂದೆ ಧರಣಿ ಕೂರಿಸಿದರು. ರವಿ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಹೇಳಿದರೂ ಅವರು ಕೇಳಲಿಲ್ಲ. ಯಾವುದಾದರೂ ಸರ್ಕಾರ ಘಟನೆ ನಡೆದ ವಾರದೊಳಗೆ ಸಿಬಿಐ ತನಿಖೆಗೆ ಒಪ್ಪಿಸಿದ್ದರೆ ಅದು ನಮ್ಮ ಸರ್ಕಾರ ಎಂದು ತಮ್ಮ ಸರ್ಕಾರದ ಗುಣಗಾನ ಮಾಡಿದರು.

ನಮಗೂ ಘಟನೆಗೂ ಸಂಬಂಧ ಇರಲಿಲ್ಲ. ಉಪ್ಪು ತಿಂದವರು ನೀರು ಕುಡಿಯಲಿ ಎಂಬ ಆಶಯದೊಂದಿಗೆ ಧೈರ್ಯವಾಗಿ ನಮ್ಮ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತು. ಸಿ.ಬಿ.ಐ ವರದಿ ತುಂಬಾ ತಡವಾಗಿ ಬಂದಿತ್ತು. ಇದು ಸಿಬಿಐಗೆ ವಹಿಸುವ ಪ್ರಕರಣವಾಗಿರಲಿಲ್ಲ. ಈ ಹಿಂದೆ ಸಿ.ಐ.ಡಿ ಇಲಾಖೆಗೆ ನಡೆಸಿದ್ದ ತನಿಖೆ ಸರಿಯಾದ ಹಾದಿಯಲ್ಲಿ ಇತ್ತು ಎಂಬುದನ್ನು ಸಿಬಿಐ ವರದಿ ಹೇಳಿತ್ತು ಎಂದು ಹೇಳಿದರು.

ಏಕಮುಖ ಪ್ರೀತಿ ಅಪಾಯಕಾರಿ. ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ ಆತ್ಮಹತ್ಯೆ ಮಾಡಿಕೊಳ್ಳುವುದು ಮೂರ್ಖತನದ ಪರಮಾವಧಿ ಎಂದು ತಿಳಿ ಹೇಳಿದರು.

ಪುಸ್ತಕದಲ್ಲಿ ಹೇಳುರುವಂತೆ ಭೂಮಿ, ಕಾಮ, ಆಡಿಯೋ ಟೇಪ್ ರವಿ ಆತ್ಮಹತ್ಯೆಗೆ ಕಾರಣವೇ ಹೊರತು ಬೇರೆ ಯಾರೂ ಕಾರಣರಲ್ಲ.‌ ಸತ್ಯ ಎಂದಿದ್ದರೂ ಹೊರಗೆ ಬಂದೇ ಬರುತ್ತದೆ. ಸಿಬಿಐ ತನಿಖಾ ವರದಿಯನ್ನು ನಮ್ಮ ಸರ್ಕಾರ ಇದ್ದಾಗಲೇ ಜನರ ಮುಂದೆ ಇಡಬೇಕಾಗಿತ್ತು. ಆದರೆ, ಸಾವಿನ ಹಿಂದಿನ ಸತ್ಯ ಅದಾಗಲೇ ಬಹಿರಂಗವಾಗಿದ್ದರಿಂದ ಆ ಕೆಲಸ ನಾವು ಮಾಡಲಿಲ್ಲ ಎಂದರು.

ಒಂದಂಕಿ ಲಾಟರಿಯಲ್ಲಿ ನಾನು ಮತ್ತು ಜಾರ್ಜ್ ಅಪಾರ ಹಣ ಮಾಡಿದ್ದೇವೆ ಎಂದು ಜೆ.ಡಿ.ಎಸ್ ಆರೋಪ ಮಾಡಿತ್ತು. ಮರುದಿನವೇ ಪ್ರಕರಣವನ್ನು ಸಿ.ಬಿ.ಐ ಗೆ ವಹಿಸಿದೆ. ಕೊನೆಗೆ ಏನಾಯ್ತು? ನಾವು ಅಧಿಕಾರದಲ್ಲಿದ್ದಾಗ ಪಾರದರ್ಶಕವಾಗಿ ಆಡಳಿತ ನಡೆಸಿದ್ದೇವೆ. ರಾಜಕಾರಣಿಗಳು, ಅಧಿಕಾರಿಗಳಲ್ಲಿ ಒಳ್ಳೆಯವರು, ಕೆಟ್ಟವರು ಇದ್ದಾರೆ. ಈಗ ವ್ಯವಸ್ಥೆಯೇ ಕೆಟ್ಟು ಹೋಗಿದೆ. ಎಲ್ಲಿಯವರೆಗೆ ಸಮಾಜ ಇಂಥದನ್ನು ವಿರೋಧಿಸುವುದಿಲ್ಲವೋ ಅಲ್ಲಿಯವರೆಗೆ ವ್ಯವಸ್ಥೆ ಸುಧಾರಿಸದು ಎಂದರು.

ನಾನು ಮೊದಲ ಬಾರಿ 1983 ರಲ್ಲಿ ಚುನಾವಣೆಗೆ ನಿಂತಾಗ ಕೇವಲ 63,000 ರೂಪಾಯಿ ಖರ್ಚಾಗಿತ್ತು. ಇಂದಿನ ರಾಜಕಾರಣ ಹಿಂದಿನಂತೆ ಇಲ್ಲ. ಇದಕ್ಕೆ ಯಾರನ್ನು ದೂಷಿಸಬೇಕು? ಎಂದರು.

ಡಿ.ಕೆ ರವಿ ಆತ್ಮಹತ್ಯೆಗೆ ಸಂಬಂಧಿಸಿದ ಸಿಬಿಐ ವರದಿಯನ್ನು ಸದನದ ಮುಂದಿಟ್ಟು, ಸತ್ಯಸಂಗತಿಯನ್ನು ಜನರಿಗೆ ತಿಳಿಸಬೇಕಿತ್ತು, ನಾವದನ್ನು ಮಾಡಿಲ್ಲ. ನಾವು ಮಾಡಬೇಕಿದ್ದ ಈ ಕೆಲಸವನ್ನು ರಾಮಕೃಷ್ಣ ಉಪಾಧ್ಯಾಯ ಅವರು ಮಾಡಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು.

Tags: Opposition leader Siddaramaiah releases book on DK Ravi
ShareSendTweetShare
Join us on:

Related Posts

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

ತಾಳಿ ಕಟ್ಟುವ ಸಮಯದಲ್ಲಿ ಮದುವೆ ಬೇಡವೆಂದ ವಧು, ಪ್ರಿಯಕರನೊಂದಿಗೆ ವಿವಾಹ

ತಾಳಿ ಕಟ್ಟುವ ಸಮಯದಲ್ಲಿ ಮದುವೆ ಬೇಡವೆಂದ ವಧು, ಪ್ರಿಯಕರನೊಂದಿಗೆ ವಿವಾಹ

Uttar Pradesh News: ತಾಳಿ ಕಟ್ಟುವಾಗ ವರನ ಎಡವಟ್ಟು, ಮಂಟಪದಲ್ಲೇ ಮಾರಾಮಾರಿ ಶುರು

Vijayapura News: ಕ್ರೈಂಗಳಿಗೆ ಬ್ರೇಕ್ ಹಾಕಬೇಕಿರುವ ಪೋಲೀಸರಿಂದಲೇ ನಾಚಿಕೆಗೇಡಿನ ಕೆಲಸ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಇದು ಜಗನ್ನಾಥನ ಪವಾಡ: ಈ ದೇವಸ್ಥಾನದ ಅನ್ನ ಪ್ರಸಾದದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಿ

Spiritual: ಇದು ಜಗನ್ನಾಥನ ಪವಾಡ: ಈ ದೇವಸ್ಥಾನದ ಅನ್ನ ಪ್ರಸಾದದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಿ

Special Story: ಹಲವರ ನೆಚ್ಚಿನ ಕ್ರಾಕ್ಸ್ ಚಪ್ಪಲಿಯ ಡಿಸೈನ್ ಮತ್ತು ಲೋಗೋ ಹಿಂದಿನ ರಹಸ್ಯ ನಿಮಗೆ ಗೊತ್ತಾ..?

Special Story: ಹಲವರ ನೆಚ್ಚಿನ ಕ್ರಾಕ್ಸ್ ಚಪ್ಪಲಿಯ ಡಿಸೈನ್ ಮತ್ತು ಲೋಗೋ ಹಿಂದಿನ ರಹಸ್ಯ ನಿಮಗೆ ಗೊತ್ತಾ..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

Spiritual: ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವುದು ಎಷ್ಟು ಮುಖ್ಯ..?: ಪರ್ತಗಾಳಿ ಮಠದ ಶ್ರೀಗಳಿಂದ ವಚನಾಮೃತ

Spiritual: ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವುದು ಎಷ್ಟು ಮುಖ್ಯ..?: ಪರ್ತಗಾಳಿ ಮಠದ ಶ್ರೀಗಳಿಂದ ವಚನಾಮೃತ

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Recipe: ಬಟಾಣಿ ಕಟ್ಲೇಟ್ ರೆಸಿಪಿ (Matar Katlet)

Recipe: ಬಟಾಣಿ ಕಟ್ಲೇಟ್ ರೆಸಿಪಿ (Matar Katlet)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In