ಶಿವಮೊಗ್ಗ: ಸೆಪ್ಟೆಂಬರ್ 22 ವಿಶ್ವ ರೋಸ್ ಡೇ ಆಚರಿಸುತ್ತಾರೆ. ಈ ದಿವಸದ ಪ್ರಯುಕ್ತ, ಇಂದು ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸಹಯೋಗದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಗುಲಾಬಿ ಹೂವು, ಹಣ್ಣು ನೀಡಿ ಆಚರಣೆ ನಡೆಸಲಾಯಿತು.
ಏನಿದು ರೋಸ್ ಡೇ?: ರೋಸ್ ಎಂಬುದು ಒಬ್ಬ ಹೆಣ್ಣುಮಗುವಿನ ಹೆಸರು. ಕ್ಯಾನ್ಸರ್ ರೋಗಿ ಮೆಲಿಂಡಾ ರೋಸ್ ಅವರಿಗೆ ಕ್ಯಾನ್ಸರ್ ತಗುಲಿತ್ತು. ಅವರು 1996ರಲ್ಲಿ ನಿಧನರಾದಾಗ ಕೇವಲ ೧೨ ವರ್ಷವಾಗಿತ್ತು. ಇವರ ಅವರ ಗೌರವಾರ್ಥವಾಗಿ ಮೊದಲ ವಿಶ್ವ ರೋಸ್ ದಿನ ಆಚರಿಸಲಾಯಿತು.
ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ರೋಟರಿ ಕ್ಲಬ್ ಶಿವಮೊಗ್ಗ ಜೊತೆಗೆ ಸೇರಿ ಆಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಧೈರ್ಯ-ಸ್ಥೈರ್ಯ ತುಂಬಲು ಗುಲಾಬಿ ಹೂವು ಹಾಗೂ ಹಣ್ಣುಗಳನ್ನು ನೀಡಿ ವಿಶ್ವ ರೋಸ್ ದಿನವನ್ನು ಆಚರಿಸಲಾಯಿತು.
ಇಂಥಹ ಕಾರ್ಯಕ್ರಮಗಳು ಕ್ಯಾನ್ಸರ್ ರೋಗಿಗಳ ಮನದಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿವೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಎಲ್ಲ ಕ್ಯಾನ್ಸರ್ ರೋಗಿಗಳು ಬೇಗ ಗುಣಮುಖರಾಗಲಿ ಎಂದು ಹಾರೈಸಿದರು.

























Discussion about this post