ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ ಬಿಜೆಪಿಗೆ ಸೆಡ್ಡು ಹೊಡೆದಿದೆ. ಹಾನಗಲ್ ನಿಂದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಸಿಂದಗಿಯಿಂದ ಅಶೋಕ ಮನಗೊಳಿ ಅವರಿಗೆ ಟಿಕೆಟ್ ನೀಡಲಾಗಿದೆ.
ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಎಂ.ಸಿ. ಮನಗೊಳಿ ಅವರ ಪುತ್ರ ಅಶೋಕ್ ಮನಗೊಳಿ ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಜೊತೆಗೆ ಕೈಜೋಡಿಸಿದ್ದರು. ಅವರಿಗೆ ಟಿಕೆಟ್ ಎಂದು ಹೇಳಲಾಗಿದ್ದರೂ ಸಹ ಇಂದು ಅಧಿಕೃತವಾಗಿ ಟಿಕೆಟ್ ಅಧಿಕೃತವಾಗಿ ನೀಡಲಾಗಿದೆ.
ಶ್ರೀನಿವಾಸ ಮಾನೆ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಅಂತಿಮವಾಗಿ ಮಾನೆ ಅವರಿಗೆ ಕಾಂಗ್ರೆಸ್ ವರಿಷ್ಠರು ಕೈನೀಡಿದ್ದಾರೆ. ಅಕ್ಟೋಬರ್ ೩೦ರಂದು ಈ ಎರಡೂ ಕ್ಷೇತ್ರಗಳಿಗೂ ಸಹ ಉಪಚುನಾವಣೆ ನಡೆಯಲಿದ್ದು, ರಾಜ್ಯದ ರಾಜಕೀಯ ರಂಗದಲ್ಲಿ ರಂಗೇರಿದ ಅಖಾಡವಾಗಿದೆ.

























Discussion about this post