ಚನ್ನೈ: ಲಂಕಾದಿಂದ ಬಂದು ಅಕ್ರಮವಾಗಿ ಮಂಗಳೂರಿನಲ್ಲಿ ನೆಲೆಸಿದ್ದ ೩೮ ಮಂದಿ ಶ್ರೀಲಂಕಾ ಪ್ರಜಎಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ( NATIONAL INVESTIATION AGENCY, GOVERNMENT OF INDIA) ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಲಂಕನ್ನರ ಚಾರ್ಜ್ ಶೀಟ್ ನಲ್ಲಿ ಲಂಕನ್ನರ ಅಂತರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ತಮಿಳುನಾಡಿನ ೬ ಮಂದಿ ಶಾಮೀಲಾಗಿದ್ದಾರೆಂಬ ಉಲ್ಲೇಖ ಇದೆ. ತಮಿಳುನಾಡಿನ ದಿನಕರನ್, ಕಾಸಿ ವಿಶ್ವನಾಥನ್, ರಸೂಲ್, ಸತ್ತಮ್ ಹುಸೇನ್, ಅಬ್ದುಲ್ ಮುಹೀತ್, ಸೂಕ್ರೇಟ್ಶ್ ಎಂಬ ೬ ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಇವರನ್ನು ವಿವಿಧ ಕಾಯ್ದೆಗಳಡಿ ಬಂಧಿಸಿ ಕೇಸು ದಾಖಲಿಸಿದ್ದಾರೆ.
ಶ್ರೀಲಂಕಾದ ಪ್ರಜೆಗಳನ್ನು ಭಾರತದ ವಿವಿಧೆಡೆಗಳಲ್ಲಿ ಇರಿಸಿ ಕೆನಡಾ ಮತ್ತಿತರ ದೇಶಗಳಿಗೆ ಮಾನವ ಕಳ್ಳಸಾಗಣೆ ರೂಪದಲ್ಲಿ ಸಾಗಿಸುವ ಪ್ರಕರಣದಲ್ಲಿ ಆರೋಪಿಗಳು ಭಾಗಿದಾರರು.
ಕಳೆದ ಜೂನ್ ನಲ್ಲಿ ೩೮ ಮಂದಿ ಶ್ರೀಲಂಕಾ ಪ್ರಜೆಗಳು ಯಾವುದೇ ದಾಖಲೆ ಇಲ್ಲದೆ ಮಂಗಳೂರಿನ ಲಾಡ್ಜ್ ಗಳಲ್ಲಿ ಪತ್ತೆಯಾಗಿದ್ದರು. ವಿಚಾರಣೆ ಸಂದರ್ಭ ಕೆನಡಾಗೆ ತೆರಳುವ ಪ್ಲಾನ್ ನಡೆಸಿದ್ದುದು ಜಾಹಿರಾಗಿತ್ತು. ಇಲ್ಲಿಗೆ ಕರೆಸಿದ್ದು ಯಾರು ಎಂಬುದರ ಬಗ್ಗೆ ತನಿಖೆ ನಡೆಸಿದ್ದ ಪೊಲೀಸ್ ಇಲಾಖೆ ಎನ್ ಐ ಎ ಗೆ ಪ್ರಕರಣದ ದಾಖಲೆ ಒದಗಿಸಿ ತನಿಖೆಗೆ ದಾರಿ ಮಾಡಿಕೊಟ್ಟಿತ್ತು.
೩೮ ಮಂದಿ ಶ್ರೀಲಂಕಾ ಪ್ರಜೆಗಳಿಗೆ ತಂಡವೊಂದು ಭಾರತದ ತಮಿಳುನಾಡು, ಕರ್ನಾಟಕದ ವಿವಿದೆಡೆ ಇರಿಸಿದ್ದು, ತಲಾ ೩.೫ ರಿಂದ ಹತ್ತು ಲಕ್ಷ ಹಣ ಪಡೆದಿದ್ದು ಸುಮಾರು ೧.೮೩ ಕೋಟಿ ಹಣ ಪಡೆದಿತ್ತು ಎನ್ನುವ ಗಮನಾರ್ಹ ವಿಚಾರ ಬೆಳಕಿಗೆ ಬಂದಿತ್ತು.
ಶ್ರೀಲಂಕಾ ಮೂಲದ ಈಸಾನ್ ಎಂಬಾತ ತನ್ನ ಸಂಗಡಿಗರೊಂದಿಗೆ ಹಣ ವಸೂಲಿ ನಡೆಸಿ ತಲೆಮರೆಸಿಕೊಂಡಿದ್ದಾನೆ. ಈತನ ಹೆಸರು ಚಾರ್ಜ್ ಶೀಟ್ ನಲ್ಲಿ ಸೇರಿಸಲಾಗಿದೆ. ಈತನ ಸೂಚನೆಯಂತೆ ತಮಿಳುನಾಡಿನಲ್ಲಿ ಆರು ಮಂದಿ ಕೆಲಸ ಮಾಡುತ್ತಿದ್ದರು ಎಂದು ತನಿಖೆ ಉಲ್ಲೇಖಿಸಿದೆ.

























Discussion about this post