ಉಳ್ಳಾಲ: ಗ್ರಾಮ ಪಂಚಾಯಿತಿ ಕಛೇರಿಗೆ ನಿವೇಶನ ಕೇಳಲು ಬಂದಿದ್ದ ಮಹಿಳೆಯರೊಂದಿಗೆ ರಾಸಲೀಲೆಗಿಳಿದಿದ್ದ ಬಿಜೆಪಿ ಬೆಂಬಲದ ಹಿರಿಯ ಗ್ರಾಮ ಪಂಚಾಯಿತಿ ಸದಸ್ಯನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಾಬು ಶೆಟ್ಟಿ (೭೫) ಎಂಬಾತನೇ ಬಂಧಿತ ಪಂಚಾಯಿತಿ ಹಿರಿಯ ಸದಸ್ಯ. ಪೊಲೀಸರು ಸಂತ್ರಸ್ತೆಯ ದೂರಿನನ್ವಯ ಆತನನ್ನು ವಶಕ್ಕೆ ಪಡೆದಿದ್ದಾರೆ.
ಬಾಬು ಶೆಟ್ಟಿ ನಿವೇಶನಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದ ಬಡ ಹೆಣ್ಣುಮಗಳೊಂದಿಗೆ ಪಂಚಾಯತ್ ಅಧ್ಯಕ್ಷರ ಕೊಠಡಿಯ ಒಳಗಡೆಯೇ ರಾಸಲೀಲೆ ನಡೆಸಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಭಾರೀ ಆಕ್ರೋಶ ಹೊಮ್ಮಿತ್ತು.
ಬಾಬು ಶೆಟ್ಟಿ ಪಂಚಾಯಿತಿ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಇಲ್ಲದ ಸಮಯ ಮಹಿಳೆಯ ಮಕ್ಕಳನ್ನು ಹೊರಗೆ ಕೂರಿಸಿ, ಮಹಿಳೆಯ ಜೊತೆಗೆ ರಾಸಲೀಲೆ ಕೃತ್ಯ ಎಸಗಿದ್ದ. ಇದರ ಚಿತ್ರಣ ಕಚೇರಿಯ ಒಳಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮೆರಾ ಫುಟೇಜ್ ವೀಕ್ಷಿಸಿದ್ದ ಪಂ. ಅಧ್ಯಕ್ಷ ಪಿಡಿಒ ಗಮನಕ್ಕೆ ತಂದಿದ್ದರು.
ಸಂತ್ರಸ್ತೆಯಿಂದಲೇ ಉಳ್ಳಾಲ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದರು. ಗ್ರಾ.ಪಂ. ಸದಸ್ಯ ಬಾಬು ಶೆಟ್ಟಿ ನಿವೇಶನ ಕೊಡಿಸುವುದಾಗಿ ತನ್ನನ್ನು ಪರಿಚಯ ಮಾಡಿಕೊಂಡು ಸೆ.೧೮ರಂದು ಪಂ. ಕಛೇರಿಗೆ ಬರಲು ಸೂಚಿಸಿದ್ದರು.
ಆಕೆಯ ಮಕ್ಕಳಿಗೆ ಹತ್ತು ರೂ. ನೀಡಿದ ಆರೋಪಿ ಆಕೆಯೊಂದಿಗೆ ರಾಸಲೀಲೆಗೆ ಬಲವಂತವಾಗಿ ಮುಂದಾಗಿದ್ದ. ಆಕೆಗೆ ಬೆದರಿಕೆಯನ್ನು ಒಡ್ಡಿದ್ದು ಇದೀಗ ಎಲ್ಲೆಡೆ ಜಾಲತಾಣಗಳಲ್ಲಿ ರಾಸಲೀಲೆ ಬಹಿರಂಗಗೊಂಡು ಮುಜುಗರಗೊಂಡ ಮಹಿಳೆ ದೂರು ನೀಡಿದ್ದಾರೆ.
ಫುಟೇಜ್ ಎಲ್ಲೆಡೆ ವೈರಲ್ ಮಾಡಿದ್ದು, ಇದೀಗ ಪಂಚಾಯತ್ ಕಛೇರಿಯವರೇ ತಮ್ಮಲ್ಲಿ ಫುಟೇಜ್ ಇಲ್ಲ ಎನ್ನುವ ಪುಕಾರ್ ಎತ್ತಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಬಗ್ಗೆ ಕೂಡಾ ಪೊಲೀಸರು ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

























Discussion about this post