ಚಿಕ್ಕಮಗಳೂರು: ಮಲೆನಾಡಿನಲ್ಲಿ ಗಾಳಿ ಮಳೆಯಿಂದಾಗಿ ಹಾನಿಗೊಳಗಾಗಿದ್ದ ಮನೆಗೆ ಅಪತ್ಕಾಲದಲ್ಲಿ ಧನ ಸಹಾಯ ಮಾಡಿ ಮಾನವೀಯತೆ ಮೆರೆದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ
ಘಟನೆ ವಿವರ: ಮೂಡಿಗೆರೆ ಕಸಬಾ ವಲಯದ ಹೆಸ್ಗಲ್ ಗ್ರಾಮದ ಬಿಳಗುಳ ನಿವಾಸಿ ಶ್ರೀಮತಿ ಕಲಾವತಿಯವರ ಮನೆ ಕುಸಿದು ಬಿದ್ದು ಹಾನಿಗೊಳಗಾಗಿತ್ತು . ಇದನ್ನು ಗಮನಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕ ಪ್ರವೀಣ್ ಪೂಜಾರಿ ಅವರು ಯೋಜನಾಧಿಕಾರಿ ಗಮನಕ್ಕೆ ತಂದು ಅವರ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಖಾವಂದರಿಗೆ ಮನವಿಯನ್ನು ಕೂಡ ಸಲ್ಲಿಸಲಾಗಿತ್ತು. ಈ ಮನವಿಗೆ ಸ್ಪಂದಿಸಿದ ಪೂಜ್ಯ ಖಾವಂದರು 15,000 ರೂಪಾಯಿ ಸಹಾಯಧನವನ್ನು ಸಂತ್ರಸ್ತ ಕುಟುಂಬಕ್ಕೆ ಮಂಜೂರು ಮಾಡಿದ್ದಾರೆ.
ಸದರಿ ಮೊತ್ತದ ಚೆಕ್ಕನ್ನು ತಾಲೂಕು ಯೋಜನಾಧಿಕಾರಿಗಳಾದ ಶಿವಾನಂದ ಪಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಪ್ರವೀಣ್ ಪೂಜಾರಿ , ಮೇಲ್ವಿಚಾರಕರಾದ ವಿಘ್ನೇಶ್ ,ಸೇವಾಪ್ರತಿನಿಧಿಗಳಾದ ಶ್ರೀಮತಿ ಕಾಮಾಕ್ಷಿ ಇವರ ಉಪಸ್ಥಿತಿಯಲ್ಲಿ ಕುಟುಂಬಕ್ಕೆ ವಿತರಿಸಲಾಯಿತು.
ಧರ್ಮಾಧಿಕಾರಿಗಳು ಈಗಾಗಲೇ ಜಿಲ್ಲೆಯಲ್ಲಿ ಹಲವು ಧರ್ಮ ಕಾರ್ಯಗಳನ್ನು ಸಹ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಅದರಲ್ಲಿ ಹಲವಾರು ನಶಿಸಿಹೋಗುವ ಹಂತದಲ್ಲಿದ್ದ ದೇವಾಲಯಗಳ ನಿರ್ಮಾಣ ಕಾರ್ಯವನ್ನು ಸಹ ಮಾಡಿದ್ದು ಜಿಲ್ಲೆ ಮರೆಯದಂತ ಮಹನೀಯರಾಗಿದ್ದಾರೆ.

























Discussion about this post